ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತಾಜ್ ದುರಸ್ತಿಗೆ 500 ಕೋಟಿ ರೂಪಾಯಿ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಜ್ ದುರಸ್ತಿಗೆ 500 ಕೋಟಿ ರೂಪಾಯಿ !
ಭಯೋತ್ಪಾದಕರ ದಾಳಿಯಿಂದ ಹಾನಿಗೊಂಡ ತಾಜ್ ಮಹಲ್ ಹೊಟೇಲ್ ನವೀಕರಿಸಲು ಒಂದು ವರ್ಷದಷ್ಟು ಕಾಲಾವಕಾಶ ಮತ್ತು 500 ಕೋಟಿ ರೂಪಾಯಿ ಹಣ ಬೇಕಾಗಬಹುದು ಎಂದು ವಾಸ್ತು ಪರಿಣತರು ಅಂದಾಜು ಮಾಡಿದ್ದಾರೆ.

ಉಗ್ರರು ತಾಜ್ ಹೊಟೇಲಿನ ಪಾರಂಪರಿಕ ಭಾಗವನ್ನು (ಹಳೆಯ ತಾಜ್) ಸುಮಾರು 50 ಗಂಟೆಗಳ ಕಾಲ ವಶದಲ್ಲಿರಿಸಿಕೊಂಡು ಅಲ್ಲಿ ಗ್ರೆನೇಡ್, ಗುಂಡಿನ ದಾಳಿಗಳನ್ನು ನಡೆಸಿದ್ದರು. ಈ ಹೊಟೇಲು 106 ವರ್ಷಗಳಷ್ಟು ಹಳೆಯದಾಗಿದ್ದು, ಅದರ ಆರನೇ ಅಂತಸ್ತಿನಲ್ಲಿ ಐಷಾರಾಮಿ ಕೋಣೆಗಳಿದ್ದುವು. ಇದು ಸಂಪೂರ್ಣ ನಾಶವಾಗಿದೆ. ಜತೆಗೆ ನಾಲ್ಕನೇ ಅಂತಸ್ತು ಸೇರಿದಂತೆ ಇತರ ಕೆಲವು ಅಂತಸ್ತುಗಳು ಕೂಡ ಬಾಧೆಗೊಳಗಾಗಿದೆ. ಕಟ್ಟದಲ್ಲಿನ ಹಲವು ರೆಸ್ಟೊರೆಂಟ್‌ಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಹಾಗಾಗಿ ದುರಸ್ತಿ ಕಾರ್ಯ ದೀರ್ಘ ಕಾಲ ಮತ್ತು ದೊಡ್ಡ ಮೊತ್ತದ ಹಣದ ಅವಶ್ಯಕತೆ ಬೇಕಾಗಬಹುದು.

"ಈ ಪಾರಂಪರಿಕ ಕಟ್ಟಡವನ್ನು ಮರುನಿರ್ಮಾಣ ಮಾಡಬೇಕಾದರೆ ಪ್ರತೀ ಚದರ ಅಡಿಗೆ ಐದು ಸಾವಿರ ರೂಪಾಯಿ ವೆಚ್ಚವಾಗಲಿದೆ. (ತಾಜ್ ಹೊಟೇಲಿಗೆ ಇದಕ್ಕಿಂತಲೂ ಹೆಚ್ಚು ಬೇಕಾಗುತ್ತದೆ). ಅದಕ್ಕಾಗಿ ಕನಿಷ್ಠ ಪಕ್ಷ ಒಂದು ವರ್ಷ ಇದನ್ನು ಮುಚ್ಚಬೇಕಾಗುತ್ತದೆ" ಎಂದು ಭಾರತೀಯ ವಾಸ್ತುಶಾಸ್ತ್ರ ಸಂಸ್ಥೆಯ ಉಪಾಧ್ಯಕ್ಷ ಪಾಂಡುರಂಗ ಪೊಟ್ನೀಸ್ ತಿಳಿಸಿದ್ದಾರೆ.

"ತಾಜ್ ಚಾರಿತ್ರಿಕ ಪಾರ್ಶ್ವವು ಅತ್ಯದ್ಭುತ ಅಪರೂಪದ ಕಲೆಯಿಂದ ಮೇಳೈಸುತ್ತಿತ್ತು ಮತ್ತು ಇವುಗಳು ಕೈಯಿಂದಲೇ ಮಾಡಿದವು. ಮರ ಕೆತ್ತನೆಯ ಕೆಲಸಗಳು ವಸಾಹತು ಯುಗದ್ದಾಗಿದ್ದು, ಮರುಸ್ಥಾಪನೆ ಕಷ್ಟ" ಎಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

"ಯಾವುದೇ ಕೆಲಸಗಳನ್ನು ಈಗ ಆರಂಭಿಸುತ್ತಿಲ್ಲ. ರಾಷ್ಟ್ರೀಯ ಭದ್ರತಾ ದಳದವರು ಇನ್ನೂ ತಪಾಸಣೆ ನಿರತರಾಗಿದ್ದಾರೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದೇವೆ" ಎಂದು ಟಾಟಾ ಹೊಟೇಲುಗಳ ಸಮ‌ೂಹದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ರೇಮಂಡ್ ಬಿಕ್ಸನ್ ತಿಳಿಸಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಭಾವ್ಯ ದಾಳಿಯ ಮಾಹಿತಿ ಇತ್ತು: ರತನ್ ಟಾಟಾ
ಉದ್ಯಮಿಗಳಿಂದ ಶಸ್ತ್ರಾಸ್ತ್ರ ಅನುಮತಿ ಬೇಡಿಕೆ
ಟೆಲಿಕಾಂ ಆದಾಯದಲ್ಲಿ ಭಾರಿ ಹೆಚ್ಚಳ ಸಾಧ್ಯತೆ?
ಐಟಿ ಕಂಪೆನಿಗಳಿಗೆ ಭದ್ರತೆ,ಕಟ್ಟೆಚ್ಚರ
ತಾಜ್‌ ಹೋಟೆಲ್‌ಗೆ ರತನ್ ಟಾಟಾ ಭೇಟಿ
ಆರ್ಥಿಕತೆಗೆ ಬೆದರಿಕೆಯೊಡ್ಡಲು ಭಯೋತ್ಪಾದಕ ದಾಳಿ