ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಕುಸಿತ
ಜಾಗತಿಕ ಕುಸಿತದ ಪರಿಣಾಮ ದೇಶೀಯ ರಫ್ತು ವ್ಯವಹಾರದಲ್ಲೂ ಕಾಣಿಸಿಕೊಂಡಿದ್ದು, ಅಕ್ಟೋಬರ್‌ನಲ್ಲಿ 12.1 ಪ್ರತಿಶತ ಇಳಿಕೆ ಕಂಡಿದೆ. ರಫ್ತು ಆಧರಿತ ಉದ್ಯಮದ ತಯಾರಿಕಾ ಘಟಕಗಳಲ್ಲಿ ಉದ್ಯೋಗ ಕಡಿತ ಇದಕ್ಕೆ ಕಾರಣ ಎನ್ನಲಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 14.58 ಬಿಲಿಯನ್ ಡಾಲರ್‌ಗಳಿದ್ದ ರಫ್ತು ವ್ಯವಹಾರ ಈ ವರ್ಷದ ಅಕ್ಟೋಬರ್‌ಗೆ 12.82 ಬಿಲಿಯನ್ ಡಾಲರ್‌ಗೆ ಕುಸಿದಿದೆ.

ಅದೇ ಹೊತ್ತಿಗೆ ಆಮದು ವ್ಯವಹಾರ 10.6 ಪ್ರತಿಶತ ಏರಿಕೆ ಕಂಡು 23.36 ಬಿಲಿಯನ್ ಡಾಲರ್ ತಲುಪಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 21.12 ಬಿಲಿಯನ್ ಡಾಲರ್ ದಾಖಲಿಸಿತ್ತು.

ಅಕ್ಟೋಬರ್ ತಿಂಗಳ ತೈಲೋತ್ಪನ್ನಗಳ ಆಮದಿನಲ್ಲಿ 22 ಪ್ರತಿಶತ ಏರಿಕೆ ಕಂಡು ಎಂಟು ಬಿಲಿಯನ್ ಡಾಲರ್‌ಗೆ ಬಂದು ನಿಂತಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ 6.52 ಬಿಲಿಯನ್ ಡಾಲರ್ ದಾಖಲಾಗಿತ್ತು.

ತೈಲರಹಿತ ಆಮದಿನಲ್ಲಿ 5.5 ಪ್ರತಿಶತ ಏರಿಕೆಯಾಗಿದ್ದು 15.4 ಬಿಲಿಯನ್ ಡಾಲರ್‌ಗೆ ತಲುಪಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ 14.6 ಬಿಲಿಯನ್ ಡಾಲರ್ ದಾಖಲಾಗಿತ್ತು.

ರಫ್ತು ಆಧರಿತ ಉದ್ಯಮಗಳಾದ ಜವಳಿ, ಕರಕೌಶಲ, ಹರಳು ಮತ್ತು ಆಭರಣ ವಲಯಗಳಲ್ಲಿ ಉದ್ಯೋಗ ಕಡಿತಗೊಂಡ ಬಗ್ಗೆ ಭಾರೀ ಕಳವಳ ವ್ಯಕ್ತವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ದಾಳಿ: ಚಿನಿವಾರ ಪೇಟೆಗೆ ಭಾರೀ ನಷ್ಟ
ದಾಳಿಯಿಂದ ಒಟ್ಟು 50 ಸಾವಿರ ಕೋಟಿ ನಷ್ಟ
ತಾಜ್ ದುರಸ್ತಿಗೆ 500 ಕೋಟಿ ರೂಪಾಯಿ !
ಸಂಭಾವ್ಯ ದಾಳಿಯ ಮಾಹಿತಿ ಇತ್ತು: ರತನ್ ಟಾಟಾ
ಉದ್ಯಮಿಗಳಿಂದ ಶಸ್ತ್ರಾಸ್ತ್ರ ಅನುಮತಿ ಬೇಡಿಕೆ
ಟೆಲಿಕಾಂ ಆದಾಯದಲ್ಲಿ ಭಾರಿ ಹೆಚ್ಚಳ ಸಾಧ್ಯತೆ?