ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತಾಜ್ ಹೊಟೇಲು ಮಾಲಕರ ಸುಪರ್ದಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಜ್ ಹೊಟೇಲು ಮಾಲಕರ ಸುಪರ್ದಿಗೆ
ಭಯೋತ್ಪಾದಕರು ಹತರಾದ ಎರಡು ದಿನಗಳ ನಂತರ ಭದ್ರತಾ ಪಡೆಗಳು ತಾಜ್ ಮಹಲ್ ಹೊಟೇಲನ್ನು ನಮ್ಮ ಸುಪರ್ದಿಗೆ ಒಪ್ಪಿಸಿವೆ ಎಂದು ತಾಜ್ ಹೊಟೇಲುಗಳ ಸಮ‌ೂಹ ಇಂದು ತಿಳಿಸಿದೆ.

"ಡಿಸೆಂಬರ್ ಒಂದರಂದು ತಾಜ್ ಮಹಲ್ ಪಾಲೇಸ್ ಮತ್ತು ಗೋಪುರಗಳನ್ನು ತಾಜ್ ಸಮ‌ೂಹದ ಕೈಗೆ ಭದ್ರತಾ ಪಡೆಗಳು ಹಸ್ತಾಂತರಿಸಿವೆ" ಎಂದು ತಾಜ್ ಹೊಟೇಲುಗಳ ಸಮ‌ೂಹ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.

ಭದ್ರತೆ ಮತ್ತು ತನಿಖೆಯ ದೃಷ್ಟಿಯಿಂದ ಹೊಟೇಲಿನ ಯಾವುದೇ ಭಾಗಗಳನ್ನು ಉಪಯೋಗ ಮಾಡುವಂತಿಲ್ಲ. ಹೊಟೇಲಿಗೆ ಬಿಗಿ ಬಂದೋಬಸ್ತಿನ ಕಾವಲು ಹಾಕಲಾಗಿದ್ದು, ಪ್ರವೇಶ ನಿಷೇಧಕ್ಕೊಳಪಟ್ಟಿದೆ. ವಿಶೇಷ ವ್ಯಕ್ತಿಗಳಿಗೆ ಮಾತ್ರ ಹೊಟೇಲ್ ಕಟ್ಟಡವನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ.

ದೇಶದ ಮುಕುಟದಂತಿದ್ದ ಐಷಾರಾಮಿ ಹೊಟೇಲಿಗೆ ಉಗ್ರರು ದಾಳಿ ಮಾಡಿದ ನಂತರ ಅಲ್ಲಿನ ರೂಪುರೇಷೆಗಳೇ ಬದಲಾಗಿವೆ. ಸ್ಮಶಾನದಂತಾಗಿರುವ ಹೊಟೇಲು ದುರಸ್ತಿಗೊಳಗಾಗಲು ಕೂಡ ಕೆಲವು ದಿನ ಕಾಯಬೇಕಾದ ಸ್ಥಿತಿಯಿದೆ. ಸದ್ಯ ಕೆಲವು ದಿನ ತನಿಖೆಯ ಕಾರಣದಿಂದ ಪರಿಸರ ಶುಚಿಗೊಳಿಸುವುದು ಕೂಡ ದೂರದ ಮಾತಾಗಿದ್ದು, ವರ್ಷಗಳ ವರೆಗೆ ಹೊಟೇಲು ತೆರೆಯುವುದು ಅಸಾಧ್ಯ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಕುಸಿತ
ಉಗ್ರರ ದಾಳಿ: ಚಿನಿವಾರ ಪೇಟೆಗೆ ಭಾರೀ ನಷ್ಟ
ದಾಳಿಯಿಂದ ಒಟ್ಟು 50 ಸಾವಿರ ಕೋಟಿ ನಷ್ಟ
ತಾಜ್ ದುರಸ್ತಿಗೆ 500 ಕೋಟಿ ರೂಪಾಯಿ !
ಸಂಭಾವ್ಯ ದಾಳಿಯ ಮಾಹಿತಿ ಇತ್ತು: ರತನ್ ಟಾಟಾ
ಉದ್ಯಮಿಗಳಿಂದ ಶಸ್ತ್ರಾಸ್ತ್ರ ಅನುಮತಿ ಬೇಡಿಕೆ