ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರೂಪಾಯಿ ಬೆಲೆ 25 ಪೈಸೆ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೂಪಾಯಿ ಬೆಲೆ 25 ಪೈಸೆ ಕುಸಿತ
ವಿದೇಶಿ ವಿನಿಮಯ ಮಾರುಕಟ್ಟೆಯ ಮಂಗಳವಾರದ ವಹಿವಾಟಿನ ಆರಂಭದಲ್ಲಿ ಅಮೆರಿಕನ್ ಡಾಲರ್ ಎದುರಿಗೆ ರೂಪಾಯಿ 25 ಪೈಸೆ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮ‌ೂಲಗಳು ತಿಳಿಸಿವೆ.

ಅಮೆರಿಕನ್ ಡಾಲರ್‌ಗಳಿಗೆ ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ರಾತೋರಾತ್ರಿ ಅಮೆರಿಕನ್ ಶೇರುಮಾರುಕಟ್ಟೆಯಲ್ಲಿ ಭಾರೀ ನಷ್ಟವುಂಟಾದ ಕಾರಣ ಈ ಕುಸಿತ ಸಂಭವಿಸಿದೆ. ಈಗ ಡಾಲರ್ ಎದುರು 25 ಪೈಸೆಗಳ ಕುಸಿತ ಕಂಡು ರೂಪಾಯಿ ಮೌಲ್ಯ 50.53 ದಾಖಲಿಸಿದೆ. ನಿನ್ನೆ ರೂಪಾಯಿ ಮೌಲ್ಯ 21 ಪೈಸೆ ಕುಸಿತ ಕಂಡು ಅಮೆರಿಕನ್ ಡಾಲರ್ ಎದುರು 50.28 ರೂಪಾಯಿ ದಾಖಲಿಸಿ ದಿನದ ವಹಿವಾಟು ಮುಗಿಸಿತ್ತು.

ಅಂತಾರಾಷ್ಟ್ರೀಯ ಶೇರುಪೇಟೆ ಕುಸಿತದ ಕಾರಣದಿಂದ ನಿಫ್ಟಿ ಹಾಗೂ ಬಿಎಸ್‌ಇ ಕೂಡ ದುರ್ಬಲವಾಗಿದ್ದು, ಅದರ ಪರಿಣಾಮ ರೂಪಾಯಿ ಮೌಲ್ಯ ಕುಸಿದಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನ್ಯೂಯಾರ್ಕಿನಲ್ಲಿ ಡೋ ಜೋನ್ಸ್ ಇಂಡಸ್ಟ್ರಿಯಲ್ 7.70ಕ್ಕೆ ಕುಸಿದು 8,149.09 ಅಂಕಗಳಿಗೆ ವ್ಯವಹಾರ ಮುಕ್ತಾಯಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಜ್ ಹೊಟೇಲು ಮಾಲಕರ ಸುಪರ್ದಿಗೆ
ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಕುಸಿತ
ಉಗ್ರರ ದಾಳಿ: ಚಿನಿವಾರ ಪೇಟೆಗೆ ಭಾರೀ ನಷ್ಟ
ದಾಳಿಯಿಂದ ಒಟ್ಟು 50 ಸಾವಿರ ಕೋಟಿ ನಷ್ಟ
ತಾಜ್ ದುರಸ್ತಿಗೆ 500 ಕೋಟಿ ರೂಪಾಯಿ !
ಸಂಭಾವ್ಯ ದಾಳಿಯ ಮಾಹಿತಿ ಇತ್ತು: ರತನ್ ಟಾಟಾ