ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 9200 ನೌಕರರನ್ನು ವಜಾ ಮಾಡಲಿರುವ ಮೋರ್ಗನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
9200 ನೌಕರರನ್ನು ವಜಾ ಮಾಡಲಿರುವ ಮೋರ್ಗನ್
ಇತ್ತೀಚೆಗಷ್ಟೇ ದಿವಾಳಿಯಂಚಿಗೆ ಸರಿದಿದ್ದ ವಾಷಿಂಗ್ಟನ್ ಮ್ಯೂಚುವಲ್ ಹಣಕಾಸು ಸಂಸ್ಥೆಯನ್ನು ರಕ್ಷಿಸಿದ್ದ ಜೆ.ಪಿ. ಮೋರ್ಗನ್ ಆ ಬ್ಯಾಂಕಿನಿಂದ ಸದ್ಯದಲ್ಲೇ ಸುಮಾರು 9200 ನೌಕರರನ್ನು ವಜಾ ಮಾಡಲಿದೆ ಎಂದು ತಿಳಿದು ಬಂದಿದೆ.

ಸೆಪ್ಟೆಂಬರ್‌ನಲ್ಲಿ ದಿವಾಳಿಯಾಗಿದ್ದ ಅಮೆರಿಕಾದ ಬಹುದೊಡ್ಡ ಹಣಕಾಸು ಸಂಸ್ಥೆಯಾಗಿದ್ದ ವಾಷಿಂಗ್ಟನ್ ಮ್ಯೂಚುವಲ್ ನಂತರ ಜೆ.ಪಿ. ಮೋರ್ಗನ್ ಸುಪರ್ದಿಗೆ ಹೋಗಿತ್ತು. ಈ ಬ್ಯಾಂಕಿನ ಮೇಲೆ 1.9 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿ ಮರುಚಾಲನೆ ನೀಡಿದ್ದು ಜೆ.ಪಿ. ಮೋರ್ಗನ್ ಸಂಸ್ಥೆ. ಸುಮಾರು 42 ಸಾವಿರ ಮಂದಿ ನೌಕರರಿರುವ ಈ ಬ್ಯಾಂಕಿನಿಂದ ಇದೀಗ 9200 ನೌಕರರನ್ನು ವಜಾ ಮಾಡಲಾಗುತ್ತದೆ ಎಂಬ ಪ್ರಕಟಣೆ ಹೊರ ಬಿದ್ದಿದೆ.

ಅಂದಾಜು ನಾಲ್ಕು ಸಾವಿರದಷ್ಟು ಹುದ್ದೆಗಳನ್ನು ಜನವರಿಯಲ್ಲಿ ಮತ್ತು 5200 ಹುದ್ದೆಗಳನ್ನು ನಂತರ ರದ್ದು ಮಾಡಲಾಗುವುದು ಎಂದು ಜೆ.ಪಿ. ಮೋರ್ಗನ್ ಸೋಮವಾರ ತಿಳಿಸಿದೆ. ವಜಾಗೊಳ್ಳುವ ನೌಕರರು ವಾರ್ಷಿಕ ಎರಡರಷ್ಟು ವೇತನವನ್ನು ಪಡೆಯಲಿದ್ದಾರೆ.

ಜಗತ್ತಿನ ದೊಡ್ಡಣ್ಣ ಅಮೆರಿಕಾ ಈಗ ನಿರುದ್ಯೋಗದಿಂದ ತತ್ತರಿಸುತ್ತಿದೆ. ನವೆಂಬರ್ ತಿಂಗಳೊಂದರಲ್ಲೇ ಸುಮಾರು 240000 ಮಂದಿ ನಿರುದ್ಯೋಗಿಗಳಾಗಿದ್ದಾರೆ. ಅಮೆರಿಕಾದ ಒಟ್ಟು ಜನಸಂಖ್ಯೆಯ ಶೇಕಡಾ 6.5ರಷ್ಟು ಮಂದಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೂಪಾಯಿ ಬೆಲೆ 25 ಪೈಸೆ ಕುಸಿತ
ತಾಜ್ ಹೊಟೇಲು ಮಾಲಕರ ಸುಪರ್ದಿಗೆ
ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಕುಸಿತ
ಉಗ್ರರ ದಾಳಿ: ಚಿನಿವಾರ ಪೇಟೆಗೆ ಭಾರೀ ನಷ್ಟ
ದಾಳಿಯಿಂದ ಒಟ್ಟು 50 ಸಾವಿರ ಕೋಟಿ ನಷ್ಟ
ತಾಜ್ ದುರಸ್ತಿಗೆ 500 ಕೋಟಿ ರೂಪಾಯಿ !