ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಸ್‌ಬಿಐಗೆ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್‌ಬಿಐಗೆ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ
ಲಂಡನ್ ಮ‌ೂಲದ ಫೈನಾನ್ಸಿಯಲ್ ಟೈಮ್ಸ್ ಗ್ರೂಪ್‌‌ನ 'ದಿ ಬ್ಯಾಂಕರ್' ಮ್ಯಾಗಜಿನ್ ಭಾರತದ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ವನ್ನು 2008ರ ಅತ್ಯುತ್ತಮ ಬ್ಯಾಂಕ್ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.

ಬ್ಯಾಂಕರ್ ಮ್ಯಾಗಜಿನ್‌ನ ಹಿರಿಯ ಸಂಪಾದಕ ಸ್ಟೀಫನ್ ಟೈಮ್‌ವೆಲ್ ಪ್ರಶಸ್ತಿಯನ್ನು ಸ್ಟೇಟ್ ಬ್ಯಾಂಕ್ ಅಧ್ಯಕ್ಷ ಓಂ ಪ್ರಕಾಶ್ ಭಟ್‌ರವರಿಗೆ ಹಸ್ತಾಂತರಿಸಿದರು ಎಂದು ಸೋಮವಾರ ಬ್ಯಾಂಕ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಪ್ರಶಸ್ತಿಯನ್ನು ಆಳ ಅಧ್ಯಯನ ಮತ್ತು ವ್ಯವಹಾರಗಳ ಪರಿಶೀಲನೆಯಲ್ಲಿನ ನಿರ್ವಹಣೆಯನ್ನಾಧರಿಸಿ ನೀಡಲಾಗಿದೆ. ಆ ಮ‌ೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಎಂದು ಹೇಳಲಾಗಿದೆ. ನವೆಂಬರ್ 26ರಂದು ಲಂಡನ್‌ನ ಡಾರ್ಚೆಸ್ಟರ್ ಹೊಟೇಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಾರ್ಡ್ ಪ್ರದಾನ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು 1806ರಲ್ಲಿ ಕೊಲ್ಕತ್ತಾದಲ್ಲಿ ಸ್ಥಾಪಿಸಲಾಗಿತ್ತು. ಆಗ ಅದರ ಹೆಸರು ಬ್ಯಾಂಕ್ ಆಫ್ ಕೊಲ್ಕತ್ತಾ ಎಂಬುದಾಗಿ ನಾಮಕರಣ ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
9200 ನೌಕರರನ್ನು ವಜಾ ಮಾಡಲಿರುವ ಮೋರ್ಗನ್
ತಾಜ್ ಹೊಟೇಲು ಮಾಲಕರ ಸುಪರ್ದಿಗೆ
ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಕುಸಿತ
ಉಗ್ರರ ದಾಳಿ: ಚಿನಿವಾರ ಪೇಟೆಗೆ ಭಾರೀ ನಷ್ಟ
ದಾಳಿಯಿಂದ ಒಟ್ಟು 50 ಸಾವಿರ ಕೋಟಿ ನಷ್ಟ
ತಾಜ್ ದುರಸ್ತಿಗೆ 500 ಕೋಟಿ ರೂಪಾಯಿ !