ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ
ಅಮೆರಿಕದಲ್ಲಿನ ಆರ್ಥಿಕ ಕುಸಿತ ಹಾಗೂ ಹೂಡಿಕೆದಾರರ ಬೇಡಿಕೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡ ಕಾರಣ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡಿದೆ. ಏಷಿಯಾದಲ್ಲಿ ಬ್ಯಾರೆಲ್‌ಗೆ 49 ಅಮೆರಿಕನ್ ಡಾಲರ್‌ಗೆ ಬಂದು ನಿಂತಿರುವ ತೈಲ ಬೆಲೆ ಮ‌ೂರು ವರ್ಷಗಳಲ್ಲೇ ಅತೀ ಕಡಿಮೆ ಎನ್ನಲಾಗಿದೆ.

ಜನವರಿ ತಿಂಗಳಿಗಾಗಿನ ಕಚ್ಚಾ ತೈಲ ಪೂರೈಕೆಯಲ್ಲಿ ಶೇಕಡಾ 57ರಷ್ಟು ಇಳಿಕೆಯಾಗಿರುವುದರಿಂದ ನ್ಯೂಯಾರ್ಕ್ ಮರ್ಸಂಟೈಲ್ ಶೇರುಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ತೈಲದ ಬೆಲೆ 48.57 ಅಮೆರಿಕನ್ ಡಾಲರ್ ಬೆಲೆಗೆ ತಲುಪಿದೆ.

ಜಗತ್ತಿನ ಕೇಂದ್ರ ಬಿಂದುವೆನ್ನಲಾಗುವ ಅಮೆರಿಕದಲ್ಲಿನ ಆರ್ಥಿಕತೆ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಕಂಡ ಕಾರಣ ಮಧ್ಯರಾತ್ರಿಯಿಂದಲೇ 5.15 ಡಾಲರ್ ಕುಸಿತ ಕಂಡು ಪ್ರತಿ ಬ್ಯಾರೆಲ್‌ಗೆ 49.28 ಅಮೆರಿಕನ್ ಡಾಲರ್‌‌ಗಳಿಗೆ ಬಂದು ನಿಂತಿತು.

ಏಷ್ಯನ್ ಮಾರುಕಟ್ಟೆಯಲ್ಲಿ ಕೂಡ ಆರಂಭಿಕ ಇಳಿಕೆ ದಾಖಲಾಗಿದೆ. ಜಪಾನ್ ಶೇರುಪೇಟೆಯ ನಿಕ್ಕಿ 225 ಸೂಚ್ಯಂಕಗಳ ಇಳಿಕೆ ಕಂಡಿದ್ದು, ಶೇ 4.9ರ ಕುಸಿತ ಕಂಡಿದೆ. ಕೊರಿಯಾ ಶೇರುಪೇಟೆಯಲ್ಲಿ ಶೇ 3.6 ಹಾಗೂ ಆಸ್ಟ್ರೇಲಿಯಾದಲ್ಲಿ ಶೇ 2.8ರ ಇಳಿಕೆ ಕಂಡು ಬಂದಿದೆ. ಕಚ್ಚಾ ತೈಲಗಳ ಮೇಲಿನ ಹೂಡಿಕೆದಾರರು ಶೇರುಪೇಟೆಯಲ್ಲಿನ ಆರ್ಥಿಕತೆಯ ಬ್ಯಾರೋಮೀಟರ್ ಏರಿಳಿತವನ್ನು ಗಮನಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐಗೆ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ
9200 ನೌಕರರನ್ನು ವಜಾ ಮಾಡಲಿರುವ ಮೋರ್ಗನ್
ರೂಪಾಯಿ ಬೆಲೆ 25 ಪೈಸೆ ಕುಸಿತ
ತಾಜ್ ಹೊಟೇಲು ಮಾಲಕರ ಸುಪರ್ದಿಗೆ
ಅಕ್ಟೋಬರ್‌ನಲ್ಲಿ ರಫ್ತು ಪ್ರಮಾಣ ಕುಸಿತ
ಉಗ್ರರ ದಾಳಿ: ಚಿನಿವಾರ ಪೇಟೆಗೆ ಭಾರೀ ನಷ್ಟ