ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಥೈಲ್ಯಾಂಡ್ ಬಿಕ್ಕಟ್ಟು : ಶೃಂಗಸಭೆ ಮುಂದೂಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಥೈಲ್ಯಾಂಡ್ ಬಿಕ್ಕಟ್ಟು : ಶೃಂಗಸಭೆ ಮುಂದೂಡಿಕೆ
ಥೈಲ್ಯಾಂಡ್‌ನಲ್ಲಿ ಎದುರಾದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉದ್ರಿಕ್ತ ವಾತಾವರಣವಿರುವುದರಿಂದ ಭಾರತ-ಏಷ್ಯಾ ಶೃಂಗಸಭೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಬ್ಯಾಂಕಾಂಕ್‌ನಲ್ಲಿರುವ ಭಾರತದ ರಾಯಭಾರಿ ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋ-ಏಷ್ಯಾ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಉಪಸ್ಥಿತಿಯಲ್ಲಿ 1.5 ಬಿಲಿಯನ್ ಜನತೆಯ ಮಾರುಕಟ್ಟೆ ವಹಿವಾಟು ಕುರಿತಂತೆ ಚರ್ಚೆ ನಡೆಯುವ ಸಾಧ್ಯತೆಗಳಿದ್ದವು ಎಂದು ಮೂಲಗಳಉ ತಿಳಿಸಿವೆ.

ಸರಕಾರ ವಿರೋಧಿ ಪ್ರತಿಭಟನಾಕಾರರು ಥೈಲ್ಯಾಂಡ್‌ನ ಎರಡು ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋ-ಏಷ್ಯಾ ಶೃಂಗಸಭೆ ಮೊದಲು ಬ್ಯಾಂಕಾಕ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು . ಆದರೆ ಕೆಲ ಕಾರಣಗಳಿಂದಾಗಿ ಮತ್ತೆ ದೇಶದ ಉತ್ತರ ಭಾಗದಲ್ಲಿರುವ ಚಿಯಾಂಗ್ ಮೈ ಗೆ ವರ್ಗಾಯಿಸಲಾಗಿತ್ತು ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಕುಸಿತ ತಡೆಗೆ ಪ್ಯಾಕೇಜ್ ಘೋಷಣೆ :ಪ್ರಧಾನಿ
ಎಸ್‌ಬಿಐ: 4280 ಉದ್ಯೋಗಿಗಳ ನೇಮಕ
ಬ್ಯಾಂಕಾಕ್: ವಿಮಾನ ನಿಲ್ದಾಣ ಕಾರ್ಯಾರಂಭ
ಮುಂಬೈ ಮತ್ತಷ್ಟು ಪ್ರಬಲವಾಗಲಿದೆ: ಉದ್ಯಮಿಗಳು
ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ
ಎಸ್‌ಬಿಐಗೆ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿ