ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ದರ ಕುಸಿತ: ಪ್ರತಿ ಬ್ಯಾರೆಲ್‌ಗೆ 46 ಡಾಲರ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ದರ ಕುಸಿತ: ಪ್ರತಿ ಬ್ಯಾರೆಲ್‌ಗೆ 46 ಡಾಲರ್‌
ಅಮೆರಿಕದ ಆರ್ಥಿಕ ಕುಸಿತ ಹಾಗೂ ಇಂಧನ ಬೇಡಿಕೆ ಇಳಿಕೆಯ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ದರಗಳು ಸತತ ನಾಲ್ಕನೇ ದಿನ ಕುಸಿತ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ 46 ಡಾಲರ್‌ಗೆ ಇಳಿಕೆಯಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಕಳೆದ ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 147.27 ಡಾಲರ್‌ಗಳಿಗೆ ತಲುಪಿದ್ದ ಇಂಧನ ದರ, ಪ್ರಸಕ್ತ ಅವಧಿಯಲ್ಲಿ 100 ಡಾಲರ್‌ಗಳ ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 47ಡಾಲರ್‌ಗಳಿಗೆ ತಲುಪಿದೆ. ಬೇಡಿಕೆಯ ಕುಸಿತದಿಂದಾಗಿ ದರ ಇಳಿಮುಖವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಜನೆವರಿ ತಿಂಗಳ ತೈಲ ವಿತರಣೆಯಲ್ಲಿ 83 ಸೆಂಟ್‌ಗಳ ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 45.96 ಡಾಲರ್‌ಗಳಿಗೆ ನಿಗದಿಯಾಗಿದೆ. 2005ರ ಫೆಬ್ರವರಿ ತಿಂಗಳಿನಲ್ಲಿ ಪ್ರತಿ ಬ್ಯಾರೆಲ್‌ಗೆ 45.42 ಡಾಲರ್‌ ಕನಿಷ್ಟವಾಗಿ ಇಳಿಕೆಯಾಗಿತ್ತು.

ಬುಧವಾರದ ವಹಿವಾಟಿನಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ 17 ಸೆಂಟ್‌ಗಳ ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 46.79 ಡಾಲರ್‌ಗಳಿಗೆ ತಲುಪಿತ್ತು ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
31,500 ನೌಕರರ ವಜಾಗೆ ಜಿಎಂ ತೀರ್ಮಾನ
ಥೈಲ್ಯಾಂಡ್ ಬಿಕ್ಕಟ್ಟು : ಶೃಂಗಸಭೆ ಮುಂದೂಡಿಕೆ
ಆರ್ಥಿಕ ಕುಸಿತ ತಡೆಗೆ ಪ್ಯಾಕೇಜ್ ಘೋಷಣೆ :ಪ್ರಧಾನಿ
ಎಸ್‌ಬಿಐ: 4280 ಉದ್ಯೋಗಿಗಳ ನೇಮಕ
ಬ್ಯಾಂಕಾಕ್: ವಿಮಾನ ನಿಲ್ದಾಣ ಕಾರ್ಯಾರಂಭ
ಮುಂಬೈ ಮತ್ತಷ್ಟು ಪ್ರಬಲವಾಗಲಿದೆ: ಉದ್ಯಮಿಗಳು