ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೇ.8.4ಕ್ಕಿಳಿದ ಹಣದುಬ್ಬರ ದರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.8.4ಕ್ಕಿಳಿದ ಹಣದುಬ್ಬರ ದರ
ಕಳೆದ ವಾರ ದಾಖಲಾಗಿದ್ದ ಶೇ.8.84ರ ಹಣದುಬ್ಬರ ದರ ನವೆಂಬರ್ 22ಕ್ಕೆ ಅಂತ್ಯಗೊಂಡಂತೆ ವಾರ್ಷಿಕ ಹಣದುಬ್ಬರ ದರ ಶೇ.8.40ಕ್ಕೆ ಇಳಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಪ್ರಸಕ್ತ ವಾರದಲ್ಲಿ ವಾರ್ಷಿಕ ಹಣದುಬ್ಬರ ದರ ಶೇ.3.11 ರಷ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚು ಉತ್ಪನ್ನಗಳನ್ನು ಆವರಿಸಿರುವ ಗ್ರಾಹಕ ಸೂಚ್ಯಂಕ ದರ ತಿಂಗಳಿಗೊಮ್ಮೆ ಪ್ರಕಟವಾಗುತ್ತಿರುವುದರಿಂದ ಸಗಟು ಸೂಚ್ಯಂಕ ದರವನ್ನು ಅದರೊಂದಿಗೆ ಹೋಲಿಸಿ ನೋಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಹಾರೋತ್ಪನ್ನಗಳು ಸೇರಿದಂತೆ ಅಗತ್ಯ ದಿನಸಿ ವಸ್ತುಗಳ ಸಗಟು ಸೂಚ್ಯಂಕ ದರ ಪ್ರಸಕ್ತ ವಾರದಲ್ಲಿ ಶೇ,0.1ರಷ್ಟು ಏರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.

ಸೀಮೆ ಎಣ್ಣೆ ದರದಲ್ಲಿ ಶೇ.23 ರಷ್ಟು ಇಳಿಕೆಯಾಗಿದೆ. ವೈಮಾನಿಕ ಇಂಧನ ಮತ್ತು ಡಿಸೈಲ್ ತೈಲ ದರಗಳು ಕ್ರಮವಾಗಿ ಶೇ,14 ರಿಂದ ಶೇ.11ಕ್ಕೆ ಕುಸಿದಿದ್ದರಿಂದ ಇಂಧನ ಸೂಚ್ಯಂಕ ದರ ಶೇ.2.3ರಷ್ಟು ಇಳಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಾಣಿಜ್ಯ ವಾಹನಗಳ ಉತ್ಪಾದನಾ ತೆರಿಗೆ ಕಡಿತ ?
90 ದಿನಗಳಲ್ಲಿ 65 ಸಾವಿರ ಉದ್ಯೋಗಿಗಳಿಗೆ ಅರ್ಧಚಂದ್ರ
ತೈಲ ದರ ಕುಸಿತ: ಪ್ರತಿ ಬ್ಯಾರೆಲ್‌ಗೆ 46 ಡಾಲರ್‌
31,500 ನೌಕರರ ವಜಾಗೆ ಜಿಎಂ ತೀರ್ಮಾನ
ಥೈಲ್ಯಾಂಡ್ ಬಿಕ್ಕಟ್ಟು : ಶೃಂಗಸಭೆ ಮುಂದೂಡಿಕೆ
ಆರ್ಥಿಕ ಕುಸಿತ ತಡೆಗೆ ಪ್ಯಾಕೇಜ್ ಘೋಷಣೆ :ಪ್ರಧಾನಿ