ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಮ್ಮು ,ಕಾಶ್ಮೀರದಲ್ಲಿ ಟಾಟಾ ಇಂಡಿಕಾಂ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು ,ಕಾಶ್ಮೀರದಲ್ಲಿ ಟಾಟಾ ಇಂಡಿಕಾಂ ಆರಂಭ
PTI
ಜಮ್ಮು : ಮೊಬೈಲ್ ಸಂಪರ್ಕ ಜಾಲದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಟೆಲಿ ಸರ್ವಿಸಸ್‌ನ ಟಾಟಾ ಇಂಡಿಕಾಂ, ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಬೈಲ್ ಸಂಪರ್ಕ ಸೇವೆಯನ್ನು ಆರಂಭಿಸಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಂಪರ್ಕ ನೀಡಿದ ಸಂಸ್ಥೆಯ ಹೆಗ್ಗಳಿಕೆಗೆ ಪಾತ್ರವಾಗಿದೆ ಕಂಪೆನಿಯ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆಯನ್ನು ಆರಂಭಿಸುವುದರೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಟಾಟಾ ಇಂಡಿಕಾಂ ಸಂಪರ್ಕ ಜಾಲವನ್ನು ವಿಸ್ತರಿಸಿದಂತಾಗಿದೆ ಎಂದು ಟಾಟಾ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರದಾನಾ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಮೊದಲ ಹಂತವಾಗಿ 100 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದು ಟಾಟಾ ಟೆಲಿ ಸರ್ವಿಸಸ್ ಲಿಮಿಟೆಡ್ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತವಾಗಿ 29 ಪಟ್ಟಣಗಳಿಗೆ ಸಂಪರ್ಕ ಒದಗಿಸಲಾಗಿದ್ದು, ಮುಂಬರುವ ದಿನಗಳಲ್ಲಿ 36 ಪಟ್ಟಣಗಳ ಸಂಪರ್ಕವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅನಿಲ್ ಸರದಾನಾ ತಿಳಿಸಿದ್ದಾರೆ.

ಉಧ್ಘಾಟನಾ ಸಮಾರಂಭದ ಅಂಗವಾಗಿ 199 ರೂಪಾಯಿಗಳ ಆರಂಭಿಕ ಟ್ಯಾರಿಫ್ ಹೊಂದಿರುವ ' ಗೋ ಆಕ್ಟಿವ್ ಪ್ಯಾಕ್ ' ಪರಿಚಯಿಸಿದ್ದು,ಸ್ಥಳೀಯ ಕರೆಗಳನ್ನು ಕೇವಲ 50ಪೈಸೆ ಮತ್ತು ಎಸ್‌ಟಿಡಿ ಕರೆಗಳನ್ನು 1 ರೂಪಾಯಿಗೆ ನಿಗದಿಪಡಿಸಿದೆ.

ಟಾಟಾ ಇಂಡಿಕಾಂ ಉತ್ಪನ್ನಗಳು ಹಾಗೂ ಸೇವೆಗಳನ್ನು ರಾಜ್ಯದ ಟಾಟಾ ಇಂಡಿಕಾಂ ಶೋರೂಂಗಳಲ್ಲಿ ಗ್ರಾಹಕರು ಪಡೆಯಬಹುದು ಎಂದವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರದಾನಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇ.8.4ಕ್ಕಿಳಿದ ಹಣದುಬ್ಬರ ದರ
ವಾಣಿಜ್ಯ ವಾಹನಗಳ ಉತ್ಪಾದನಾ ತೆರಿಗೆ ಕಡಿತ ?
90 ದಿನಗಳಲ್ಲಿ 65 ಸಾವಿರ ಉದ್ಯೋಗಿಗಳಿಗೆ ಅರ್ಧಚಂದ್ರ
ತೈಲ ದರ ಕುಸಿತ: ಪ್ರತಿ ಬ್ಯಾರೆಲ್‌ಗೆ 46 ಡಾಲರ್‌
31,500 ನೌಕರರ ವಜಾಗೆ ಜಿಎಂ ತೀರ್ಮಾನ
ಥೈಲ್ಯಾಂಡ್ ಬಿಕ್ಕಟ್ಟು : ಶೃಂಗಸಭೆ ಮುಂದೂಡಿಕೆ