ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾಹಿತಿ ತಂತ್ರಜ್ಞಾನ ವಹಿವಾಟಿನಲ್ಲಿ ಏರಿಕೆ:ಗೋಪಾಲ್‌‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಹಿತಿ ತಂತ್ರಜ್ಞಾನ ವಹಿವಾಟಿನಲ್ಲಿ ಏರಿಕೆ:ಗೋಪಾಲ್‌‌
2008-09ರ ಆರ್ಥಿಕ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಶೇ.15 ರಷ್ಟು ಪ್ರಗತಿ ಹೊಂದುವ ಸಾಧ್ಯತೆಗಳಿವೆ ಎಂದು ಇನ್ಫೋಸಿಸ್ ಟೆಕ್ನಾಲಾಜೀಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಹಿವಾಟಿನಲ್ಲಿ ಶೇ.30ರಷ್ಟು ಹೆಚ್ಚಳವಾಗಿದ್ದು, ಆರ್ಥಿಕ ಕುಸಿತದಿಂದಾಗಿ ಶೇ.15 ರಷ್ಟಾದರೂ ವಹಿವಾಟು ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ ಎಂದು ಇನ್ಫೋಸಿಸ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ಕೃಷ್ಣನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಸಕ್ತ ವರ್ಷಾಂತ್ಯಕ್ಕೆ ಇನ್ಫೋಸಿಸ್ ಸಂಸ್ಥೆ 25 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು,ನಂತರ ಯಾವುದೇ ನೇಮಕಾತಿ ಮಾಡಿಕೊಳ್ಳುವುದಿಲ್ಲ .ಕಂಪೆನಿಯಲ್ಲಿರುವ ನೌಕರರನ್ನು ವಜಾಗೊಳಿಸುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.

ಇನ್ಫೋಸಿಸ್ ಕಂಪೆನಿಯ ವಹಿವಾಟು ನಿಧಾನಗತಿಯಲ್ಲಿ ಸಾಗುತ್ತಿದ್ದರೂ ಮೂರನೇ ತ್ರೈಮಾಸಿಕ ಲಾಭದಲ್ಲಿ ಯಾವುದೇ ಕುಸಿತವಿಲ್ಲ ಎಂದು ಸಿಇಒ ಗೋಪಾಲ್ ಕೃಷ್ಣನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮ್ಮು ,ಕಾಶ್ಮೀರದಲ್ಲಿ ಟಾಟಾ ಇಂಡಿಕಾಂ ಆರಂಭ
ಶೇ.8.4ಕ್ಕಿಳಿದ ಹಣದುಬ್ಬರ ದರ
ವಾಣಿಜ್ಯ ವಾಹನಗಳ ಉತ್ಪಾದನಾ ತೆರಿಗೆ ಕಡಿತ ?
90 ದಿನಗಳಲ್ಲಿ 65 ಸಾವಿರ ಉದ್ಯೋಗಿಗಳಿಗೆ ಅರ್ಧಚಂದ್ರ
ತೈಲ ದರ ಕುಸಿತ: ಪ್ರತಿ ಬ್ಯಾರೆಲ್‌ಗೆ 46 ಡಾಲರ್‌
31,500 ನೌಕರರ ವಜಾಗೆ ಜಿಎಂ ತೀರ್ಮಾನ