ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪೆಟ್ರೋಲ್‌ಗೆ 10, ಡೀಸೆಲ್‌ಗೆ 3 ರೂಪಾಯಿ ಇಳಿಕೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲ್‌ಗೆ 10, ಡೀಸೆಲ್‌ಗೆ 3 ರೂಪಾಯಿ ಇಳಿಕೆ?
PTI
ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ಅಂತ್ಯಗೊಳ್ಳುತ್ತಿರುವಂತೆ ಕೇಂದ್ರ ಸರಕಾರವು ಪೆಟ್ರೋಲಿಯಂ ಬೆಲೆಗಳಲ್ಲಿ ಕಡಿತಗೊಳಿಸಲು ಮುಂದಾಗಿದೆ ಎನ್ನಲಾಗಿದೆ. ಪೆಟ್ರೋಲಿಗೆ ಲೀಟರೊಂದರ 10 ರೂಪಾಯಿ, ಡೀಸೆಲ್ ಮ‌‌ೂರು ರೂಪಾಯಿ ಮತ್ತು ಗೃಹ ಬಳಕೆಯ ಎಲ್‌ಪಿಜಿಗೆ 20 ರೂಪಾಯಿ ಇಳಿಸಲಿದೆ ಎಂದು ಸರಕಾರಿ ಮೂಲಗಳು ಹೇಳಿವೆ.

ವಿದೇಶಿ ಮಾರು ಕಟ್ಟೆಯಲ್ಲಿ ಕಚ್ಚಾತೈಲದಲ್ಲಿ ಭಾರೀ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸರಕಾರ ಬೆಲೆ ಇಳಿಕೆಗೆ ಮುಂದಾಗಿದೆ.
"ರಾಜಸ್ಥಾನದಲ್ಲಿ ಮತದಾನ ಇಂದು ಕೊನೆಗೊಳ್ಳುವ ಮೂಲಕ ಪ್ರಮುಖ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಅಂತ್ಯಗೊಂಡಿದೆ. ಹಾಗಾಗಿ ಸಂಪುಟವು ಡಿಸೆಂಬರ್ 11ರಂದು ನಡೆಯಲಿರುವ ಸಭೆಯಲ್ಲಿ ದರ ಇಳಿಸುವ ನಿರ್ಧಾರ ಕೈಗೊಳ್ಳಲಿದೆ" ಎಂದು ಸರಕಾರಿ ಮೂಲಗಳು ಗುರವಾರ ತಿಳಿಸಿವೆ.

ಕಳೆದ ಮೂರು ವರ್ಷಗಳಲ್ಲಿ ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂಗಳು ಪೆಟ್ರೋಲ್ ಲೀಟರೊಂದರ 14.89 ಮತ್ತು ಡೀಸೆಲ್ ಲೀಟರೊಂದರ 3.03 ರೂಪಾಯಿ ಲಾಭದಲ್ಲಿ ಮಾರಟ ಮಾಡುತ್ತಿವೆ.

ಆಗರೆ ಸಾರ್ವಜನಿಕ ವಿತರಣೆ ಪದ್ಧತಿಯ ಮೂಲಕ ವಿತರಿಸುವ ಸೀಮೆ ಎಣ್ಣೆ ಮಾರಾಟದಿಂದ ಲೀಟರೊಂದರ ರೂ. 17.26ರಷ್ಟು ನಷ್ಟ ಅನುಭವಿಸುತ್ತಿವೆ. ಅಂತೆಯೇ 14.2 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ಮಾರಾಟದಲ್ಲೂ ಸಿಲಿಂಡರೊಂದರ ರೂ.148.32 ನಷ್ಟ ಅನುಭವಿಸುತ್ತಿವೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಏರಿಕೆ ಮತ್ತು ತೈಲ ಸಂಸ್ಥೆಗಳು ಭಾರೀ ನಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಕಳೆದ ಜೂನ್ ತಿಂಗಳಲ್ಲಿ ಲೀಟರೊಂದರ ಪೆಟ್ರೋಲ್ ಐದು ರೂಪಾಯಿ, ಡೀಸೆಲ್ ಮೂರು ರೂಪಾಯಿ ಮತ್ತು ಅಡುಗೆ ಅನಿಲಕ್ಕೆ ಸಿಲಿಂಡರೊಂದರ 50 ರೂಪಾಯಿ ಏರಿಸಿತ್ತು.

ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಯುಪಿಎ ಸರಕಾರ ಭಾರೀ ದರ ಇಳಿಕೆಗೆ ಮುಂದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಹಿತಿ ತಂತ್ರಜ್ಞಾನ ವಹಿವಾಟಿನಲ್ಲಿ ಏರಿಕೆ:ಗೋಪಾಲ್‌‌
ಜಮ್ಮು ,ಕಾಶ್ಮೀರದಲ್ಲಿ ಟಾಟಾ ಇಂಡಿಕಾಂ ಆರಂಭ
ಶೇ.8.4ಕ್ಕಿಳಿದ ಹಣದುಬ್ಬರ ದರ
ವಾಣಿಜ್ಯ ವಾಹನಗಳ ಉತ್ಪಾದನಾ ತೆರಿಗೆ ಕಡಿತ ?
90 ದಿನಗಳಲ್ಲಿ 65 ಸಾವಿರ ಉದ್ಯೋಗಿಗಳಿಗೆ ಅರ್ಧಚಂದ್ರ
ತೈಲ ದರ ಕುಸಿತ: ಪ್ರತಿ ಬ್ಯಾರೆಲ್‌ಗೆ 46 ಡಾಲರ್‌