ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೊಂಡಾ ಕಂಪೆನಿಯಿಂದ 760 ನೌಕರರ ವಜಾ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಂಡಾ ಕಂಪೆನಿಯಿಂದ 760 ನೌಕರರ ವಜಾ?
ಉತ್ತರ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ ಜನೆವರಿ ಅಂತ್ಯದ ವೇಳೆಗೆ 760 ಗುತ್ತಿಗೆ ಆಧಾರಿತ ಉದ್ಯೋಗಿಗಳನ್ನು ವಜಾಗೊಳಿಸಲು ಅಡಳಿತ ಮಂಡಳಿ ನಿರ್ಧರಿಸಿದೆ ಎಂದು ಹೊಂಡಾ ವಕ್ತಾರರು ತಿಳಿಸಿದ್ದಾರೆ.

ಜಪಾನ್‌ನ ಎರಡನೇ ಪ್ರಮುಖ ಕಾರು ತಯಾರಿಕೆ ಕಂಪೆನಿಯಾದ ಹೊಂಡಾ ಸಂಸ್ಥೆಯ ಅಧ್ಯಕ್ಷರಾದ ಟಾಕಿಯೊ ಫುಕೌ ಅವರು ಮಾತನಾಡಿ ಕಂಪೆನಿಯಲ್ಲಿ 4 ಸಾವಿರ ಗುತ್ತಿಗೆ ಆಧಾರಿತ ಉದ್ಯೋಗಿಗಳಿದ್ದು, ಮುಂಬರುವ ವರ್ಷದಲ್ಲಿ ಮತ್ತಷ್ಟು ಹುದ್ದೆಗಳನ್ನು ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಕಾರುಗಳ ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಉತ್ಪಾದನೆಯನ್ನು ಕಡಿತಗೊಳಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ಕೆಲ ವರ್ಷಗಳಲ್ಲಿ ಹೊಂಡಾ ಸಿಟಿ ಸಣ್ಣ ಕಾರುಗಳ ಬೇಡಿಕೆಗಳು ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಘಟಕಗಳನ್ನು ವಿಸ್ತರಿಸಲಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ ಉತ್ಪಾದನೆ ಕೂಡಾ ಕಡಿತ ಮಾಡಲಾಗುತ್ತದೆ ಎಂದು ಅಧ್ಯಕ್ಷ ಟಾಕಿಯೊ ಫುಕೌ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶಿಯ ಬ್ಯಾಂಕ್‌ಗಳ ಆರ್ಥಿಕತೆ ಸದೃಢ:ತೆಂಡೂಲ್ಕರ್
ಪೆಟ್ರೋಲ್‌ಗೆ 10, ಡೀಸೆಲ್‌ಗೆ 3 ರೂಪಾಯಿ ಇಳಿಕೆ?
ಮಾಹಿತಿ ತಂತ್ರಜ್ಞಾನ ವಹಿವಾಟಿನಲ್ಲಿ ಏರಿಕೆ:ಗೋಪಾಲ್‌‌
ಜಮ್ಮು ,ಕಾಶ್ಮೀರದಲ್ಲಿ ಟಾಟಾ ಇಂಡಿಕಾಂ ಆರಂಭ
ಶೇ.8.4ಕ್ಕಿಳಿದ ಹಣದುಬ್ಬರ ದರ
ವಾಣಿಜ್ಯ ವಾಹನಗಳ ಉತ್ಪಾದನಾ ತೆರಿಗೆ ಕಡಿತ ?