ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನಾಳೆ ಪ್ರದಾನಿಯಿಂದ ಪ್ಯಾಕೇಜ್ ಘೋಷಣೆ:ಕಮಲ್‌ನಾಥ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಳೆ ಪ್ರದಾನಿಯಿಂದ ಪ್ಯಾಕೇಜ್ ಘೋಷಣೆ:ಕಮಲ್‌ನಾಥ್
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ನಷ್ಟದಲ್ಲಿರುವ ವಹಿವಾಟು ಕ್ಷೇತ್ರಗಳಿಗೆ ಉತ್ತೇಜನ ನೀಡಲು ನಾಳೆ ಕೇಂದ್ರ ಸರಕಾರ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಕಮಲ್‌ನಾಥ್ ಹೇಳಿದ್ದಾರೆ.

ನಾಳೆ ಪ್ರಧಾನಿ ಮನಮೋಹನ್ ಸಿಂಗ್ ಮೊದಲ ಹಂತದ ಪ್ಯಾಕೇಜ್ ಘೋಷಣೆ ಮಾಡಲಿದ್ದು, ನಂತರ ಎರಡನೇ ಹಾಗೂ ಮೂರನೇ ಹಂತದ ಪ್ಯಾಕೇಜ್ ಘೋಷಿಸಲಾಗುವುದು ಎಂದು ಭಾರತ-ರಷ್ಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮಿತಿ ಆಯೋಜಿಸಿದ ಸಭೆಯಲ್ಲಿ ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ಅಟೋಮೊಬೈಲ್ , ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕಡಿಮೆ ಅವಧಿಯ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿ ನಾಳೆ ಆದೇಶ ಹೊರಡಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಆರ್‌ಬಿಐನೊಂದಿಗೆ ಸಂಪರ್ಕಿಸಿ ಸಂಪುಟದ ಕಾರ್ಯದರ್ಶಿಗಳು ಉತ್ತೇಜನ ಪ್ಯಾಕೇಜ್ ಸಿದ್ದಪಡಿಸಿದ್ದು, ನಾಳೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಘೋಷಣೆ ಮಾಡಲಿದ್ದಾರೆ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊಂಡಾ ಕಂಪೆನಿಯಿಂದ 760 ನೌಕರರ ವಜಾ?
ದೇಶಿಯ ಬ್ಯಾಂಕ್‌ಗಳ ಆರ್ಥಿಕತೆ ಸದೃಢ:ತೆಂಡೂಲ್ಕರ್
ಪೆಟ್ರೋಲ್‌ಗೆ 10, ಡೀಸೆಲ್‌ಗೆ 3 ರೂಪಾಯಿ ಇಳಿಕೆ?
ಮಾಹಿತಿ ತಂತ್ರಜ್ಞಾನ ವಹಿವಾಟಿನಲ್ಲಿ ಏರಿಕೆ:ಗೋಪಾಲ್‌‌
ಜಮ್ಮು ,ಕಾಶ್ಮೀರದಲ್ಲಿ ಟಾಟಾ ಇಂಡಿಕಾಂ ಆರಂಭ
ಶೇ.8.4ಕ್ಕಿಳಿದ ಹಣದುಬ್ಬರ ದರ