ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉಗ್ರರ ದಾಳಿ: ಸಚಿವ ಜೈರಾಮ್ ಪಾಕ್ ಪ್ರವಾಸ ರದ್ದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ದಾಳಿ: ಸಚಿವ ಜೈರಾಮ್ ಪಾಕ್ ಪ್ರವಾಸ ರದ್ದು
ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ನಂತರ ಭಾರತ-ಪಾಕ್ ಬಾಂಧವ್ಯದಲ್ಲಿ ಬಿರುಕು ಮೂಡಿದ್ದು, ದ್ವಿಪಕ್ಷೀಯ ಮಾತುಕತೆಗಳನ್ನು ಅನಿರ್ಧಿಷ್ಟಾವಧಿಗೆ ಮುಂದಕ್ಕೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜನೆವರಿ ಎರಡನೇ ವಾರದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದ ಕೇಂದ್ರ ವಾಣಿಜ್ಯ ಖಾತೆಯ ರಾಜ್ಯ ಸಚಿವ ಜೈರಾಮ್ ರಮೇಶ್, ಪ್ರವಾಸವನ್ನು ಹೆಚ್ಚು ಕಡಿಮೆ ರದ್ದುಪಡಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಉಭಯ ದೇಶಗಳ ಕಾರ್ಯದರ್ಶಿಗಳ ಮಾತುಕತೆಯ ಮುನ್ನ ಸಚಿವ ಜೈರಾಮ್ ರಮೇಶ್, ಜನೆವರಿ 5-9 ಅಥವಾ 13ರ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಕೇಂದ್ರ ಸರಕಾರ ಸಮಯವನ್ನು ನಿಗದಿಪಡಿಸಿತ್ತು.

ಸಚಿವ ಜೈರಾಮ್ ರಮೇಶ್ ಪಾಕಿಸ್ತಾನ್ ಪ್ರವಾಸ ಕುರಿತಂತೆ ವಾಣಿಜ್ಯ ಸಚಿವಾಲಯ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸುತ್ತಿದ್ದು, ಮುಂಬರುವ ಕೆಲ ತಿಂಗಳಗಳವರೆಗೆ ಅನುಮತಿ ದೊರೆಯುವ ಸಾಧ್ಯತೆಗಳಿಲ್ಲ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗಳು ಸ್ಥಗಿತಗೊಂಡಿದ್ದರಿಂದ, ಸಚಿವರ ಪ್ರವಾಸ ಕುರಿತಂತೆ ವಿದೇಶಾಂಗ ಸಚಿವಾಲಯ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಸುತ್ತಿನ ಮಾಕುಕತೆಯಲ್ಲಿ ವ್ಯಾಪಾರ ಒಪ್ಪಂದಗಳ ಕುರಿತಂತೆ ಚರ್ಚಿಸಲಾಗಿತ್ತು ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ವಾರ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ 200 ಮಂದಿ ಸಾವನ್ನಪ್ಪಿದ್ದು, ದೇಶದ ಆರ್ಥಿಕ ರಾಜಧಾನಿಯಾದ ಮುಂಬೈ ಮೂರು ದಿನಗಳವರೆಗೆ ಬಿಕ್ಕಟ್ಟನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ಭಾರತ ಉಗ್ರರ ದಾಳಿಗೆ ಪಾಕಿಸ್ತಾನ ಕಾರಣವೆಂದು ಆರೋಪಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಾಳೆ ಪ್ರದಾನಿಯಿಂದ ಪ್ಯಾಕೇಜ್ ಘೋಷಣೆ:ಕಮಲ್‌ನಾಥ್
ಹೊಂಡಾ ಕಂಪೆನಿಯಿಂದ 760 ನೌಕರರ ವಜಾ?
ದೇಶಿಯ ಬ್ಯಾಂಕ್‌ಗಳ ಆರ್ಥಿಕತೆ ಸದೃಢ:ತೆಂಡೂಲ್ಕರ್
ಪೆಟ್ರೋಲ್‌ಗೆ 10, ಡೀಸೆಲ್‌ಗೆ 3 ರೂಪಾಯಿ ಇಳಿಕೆ?
ಮಾಹಿತಿ ತಂತ್ರಜ್ಞಾನ ವಹಿವಾಟಿನಲ್ಲಿ ಏರಿಕೆ:ಗೋಪಾಲ್‌‌
ಜಮ್ಮು ,ಕಾಶ್ಮೀರದಲ್ಲಿ ಟಾಟಾ ಇಂಡಿಕಾಂ ಆರಂಭ