ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವೊಡಾಫೋನ್‌ನಿಂದ 10 ಸಾ.ಕೋಟಿ ಪಾವತಿ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೊಡಾಫೋನ್‌ನಿಂದ 10 ಸಾ.ಕೋಟಿ ಪಾವತಿ?
ಮುಂಬೈ ಉಚ್ಚ ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ವೊಡಾಫೋನ್ ಟಿಲಿಕಾಂ ಸಂಸ್ಥೆ ಸೋಲನುಭವಿಸಿದ ಹಿನ್ನೆಲೆಯಲ್ಲಿ 10 ಸಾವಿರ ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಬೇಕಾಗಿದೆ ಎಂದು ತೆರಿಗೆ ಇಲಾಖಾ ಮೂಲಗಳು ತಿಳಿಸಿವೆ.

ಕೇಂದ್ರ ನೇರ ತೆರಿಗೆಗಳ ಮಂಡಳಿ ಅಧ್ಯಕ್ಷ ಎನ್‌.ಬಿ.ಸಿಂಗ್ ಮಾತನಾಡಿ, ವೊಡಾಫೋನ್ ಪಾವತಿಸಬೇಕಾಗಿರುವ ಕ್ಯಾಪಿಟಲ್ ಗೇನ್ಸ್ ಮೊತ್ತ 10 ಸಾವಿರ ಕೋಟಿ ರೂ.ಗಳಾಗಿವೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಹಚಿನ್ಸನ್ ಇಂಡಿಯಾ ಕಂಪೆನಿಯನ್ನು ನೆದರ್‌ಲ್ಯಾಂಡ್ ಮೂಲದ ವೊಡಾಫೋನ್ ಕಂಪೆನಿ 11.2 ಶತಕೋಟಿ ಡಾಲರ್‌ ಪಾವತಿಸಿ ಖರೀದಿಸಿತು.ಖರೀದಿಯ ವಹಿವಾಟಿನಲ್ಲಿ ಹಚಿನ್ಸನ್ ಕಂಪೆನಿ ಕೇಂದ್ರ ಸರಕಾರಕ್ಕೆ ತೆರಿಗೆಯನ್ನು ಪಾವತಿಸಬೇಕಾಗಿದ್ದರೂ ತೆರಿಗೆ ಮೊತ್ತವನ್ನು ಮುರಿದುಕೊಂಡೇ ಹಚಿನ್ಸನ್‌ಗೆ ವೊಡಾಫೋನ್ ಉಳಿದ ಹಣ ನೀಡಬೇಕಿತ್ತು ಎಂದು ಮುಂಬೈ ಉಚ್ಚ ನ್ಯಾಯಾಲಯದಲ್ಲಿ ತೆರಿಗೆ ಇಲಾಖೆ ವಾದಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ದಾಳಿ: ಸಚಿವ ಜೈರಾಮ್ ಪಾಕ್ ಪ್ರವಾಸ ರದ್ದು
ನಾಳೆ ಪ್ರದಾನಿಯಿಂದ ಪ್ಯಾಕೇಜ್ ಘೋಷಣೆ:ಕಮಲ್‌ನಾಥ್
ಹೊಂಡಾ ಕಂಪೆನಿಯಿಂದ 760 ನೌಕರರ ವಜಾ?
ದೇಶಿಯ ಬ್ಯಾಂಕ್‌ಗಳ ಆರ್ಥಿಕತೆ ಸದೃಢ:ತೆಂಡೂಲ್ಕರ್
ಪೆಟ್ರೋಲ್‌ಗೆ 10, ಡೀಸೆಲ್‌ಗೆ 3 ರೂಪಾಯಿ ಇಳಿಕೆ?
ಮಾಹಿತಿ ತಂತ್ರಜ್ಞಾನ ವಹಿವಾಟಿನಲ್ಲಿ ಏರಿಕೆ:ಗೋಪಾಲ್‌‌