ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪೆಟ್ರೋಲ್‌, ಡೀಸೆಲ್ ದರಗಳಲ್ಲಿ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲ್‌, ಡೀಸೆಲ್ ದರಗಳಲ್ಲಿ ಕಡಿತ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 46 ಡಾಲರ್‌ಗೆ ಇಳಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ದರವನ್ನು 5 ರೂಪಾಯಿ ಮತ್ತು ಡೀಸೆಲ್ ದರವನ್ನು 2 ರೂಪಾಯಿ ಕಡಿತಗೊಳಿಸಿದ್ದು ಶುಕ್ರವಾರದ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ತಿಳಿಸಿದ್ದಾರೆ

ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿತಗೊಳಿಸಿರುವುದರಿಂದ ಇಂಧನ ಗ್ರಾಹಕರಲ್ಲಿ ಕೊಂಚ ಮಟ್ಟಿಗೆ ನೆಮ್ಮದಿ ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಏರಿಕೆಯನ್ನು ಕಂಡಿದ್ದ ಜನತೆ, ತೈಲ ದರಗಳ ಏರಿಕೆಯಿಂದಾಗಿ ಹಣ್ಣು, ತರಕಾರಿ ಅಗತ್ಯ ದಿನಸಿ ವಸ್ತುಗಳು ಮತ್ತು ಪ್ರಯಾಣ ದರ ಕೂಡಾ ಏರಿಕೆಯಾಗಿತ್ತು. ಆದರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಕಡಿತವಾಗಿದ್ದರಿಂದ ಅಗತ್ಯ ವಸ್ತುಗಳ ದರಗಳು ಇಳಿಮುಖವಾಗುವ ಸಾಧ್ಯತೆಗಳಿವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ

ಬಸ್ , ಟ್ರಕ್‌ಗಳು, ರೈಲ್ವೆಗಳಲ್ಲಿ ಡೀಸೆಲ್‌ನ್ನು ಉಪಯೋಗಿಸುವುದರಿಂದ ಡೀಸೆಲ್ ದರ ಕಡಿತದಿಂದಾಗಿ ಸರಕು ಸಾಗಣೆ ಹಾಗೂ ಪ್ರಯಾಣದ ದರಗಳಲ್ಲಿ ಕೂಡಾ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೊಡಾಫೋನ್‌ನಿಂದ 10 ಸಾ.ಕೋಟಿ ಪಾವತಿ?
ಉಗ್ರರ ದಾಳಿ: ಸಚಿವ ಜೈರಾಮ್ ಪಾಕ್ ಪ್ರವಾಸ ರದ್ದು
ನಾಳೆ ಪ್ರದಾನಿಯಿಂದ ಪ್ಯಾಕೇಜ್ ಘೋಷಣೆ:ಕಮಲ್‌ನಾಥ್
ಹೊಂಡಾ ಕಂಪೆನಿಯಿಂದ 760 ನೌಕರರ ವಜಾ?
ದೇಶಿಯ ಬ್ಯಾಂಕ್‌ಗಳ ಆರ್ಥಿಕತೆ ಸದೃಢ:ತೆಂಡೂಲ್ಕರ್
ಪೆಟ್ರೋಲ್‌ಗೆ 10, ಡೀಸೆಲ್‌ಗೆ 3 ರೂಪಾಯಿ ಇಳಿಕೆ?