ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತಷ್ಟು ಕಡಿತ ಸಾಧ್ಯತೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತಷ್ಟು ಕಡಿತ ಸಾಧ್ಯತೆ?
PTI
ಪೆಟ್ರೋಲಿಯಂ ಉತ್ಪನ್ನಗಳ ದರಗಳನ್ನು ಇಳಿಕೆ ಮಾಡಿದ ಸರಕಾರದ ನಿರ್ಧಾರವನ್ನು ಸ್ವಾಗತಿಸಿದ ಭಾರತೀಯ ಕಂಪೆನಿಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 43 ಡಾಲರ್‌ಗಳಿಗೆ ಇಳಿಕೆಯಾದ ಹಿನ್ನೆಲೆಯಲ್ಲಿ ಮತ್ತಷ್ಟು ದರಗಳನ್ನು ಇಳಿಕೆ ಮಾಡುವ ಸಾಧ್ಯತೆಗಳಿವೆ ಎಂದು ಪ್ರಕಟಿಸಿವೆ.

ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್‌ ದರಗಳಲ್ಲಿ ಕಡಿತ ಮಾಡಿರುವುದರಿಂದ ಹಣದುಬ್ಬರ ಒತ್ತಡ ನಿಯಂತ್ರಿಸಲು ಸುಲಭವಾಗುತ್ತದೆ. ಆದರೆ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 10 ರೂಪಾಯಿ ಇಳಿಕೆಯಾಗಬೇಕಿತ್ತು ಎಂದು ಕೈಗಾರಿಕೋದ್ಯಮ ಸಂಘ ಅಸೋಚಾಮ್ ತಿಳಿಸಿದೆ.

ಸೂಕ್ತ ಸಮಯದಲ್ಲಿ ಸರಕಾರದ ಸೂಕ್ತ ನಿರ್ಧಾರ ಎಂದು ಬಣ್ಣಿಸಿದ ಎಫ್‌ಐಸಿಸಿಐ ಕಾರ್ಯದರ್ಶಿ ಅಮಿತ್ ಮಿತ್ರಾ , ಇಂದರಿಂದಾಗಿ ಸಮಾಜದ ಎಲ್ಲ ಕ್ಷೇತ್ರಗಳಿಗೆ ಲಾಭವಾಗಲಿದ್ದು, ಹಣದುಬ್ಬರ ತಡಗೆ ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 150 ಡಾಲರ್‌ಗಳಿದ್ದ ದರ ಪ್ರತಿ ಬ್ಯಾರೆಲ್‌ಗೆ 50 ಡಾಲರ್‌ಗಳಿಗೆ ಇಳಿಕೆಯಾದ ಹಿನ್ನೆಲೆಯಲ್ಲಿ ಸರಕಾರದ ನಿರ್ಧಾರ ನಿರೀಕ್ಷಿತವಾಗಿದ್ದು, ಆದರೆ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 10 ರೂಪಾಯಿ ಹಾಗೂ ಡೀಸೆಲ್‌ಗೆ 3.5 ರೂಪಾಯಿ ಕಡಿತವಾಗುವುದನ್ನು ನಿರೀಕ್ಷಿಸಲಾಗಿತ್ತು ಎಂದು ಅಸೋಚಾಮ್ ಕಾರ್ಯದರ್ಶಿ ಡಿ.ಎಸ್.ರಾವತ್ ತಿಳಿಸಿದ್ದಾರೆ.


ಪೆಟ್ರೋಲ್ ,ಡೀಸೆಲ್ ಅಲ್ಪ ದರ ಕಡಿತ ಬಿಜೆಪಿಗೆ ನಿರಾಶ

ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲೆ ಅಲ್ಪ ದರ ಕಡಿತ ಘೋಷಿಸಿರುವುದು ಜನಸಾಮಾನ್ಯರಿಗೆ ನಿರಾಶೆ ತಂದಿದೆ ಎಂದು ವಿರೋಧ ಪಕ್ಷವಾದ ಬಿಜೆಪಿ ಅಸಮಧಾನ ವ್ಯಕ್ತಪಡಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು 147 ಡಾಲರ್‌ಗಳಿಂದ 43 ಡಾಲರ್‌ಗಲಿಗೆ ಇಳಿಕೆಯಾದರೂ ಶೇ.10ಕ್ಕಿಂತ ದರ ಕಡಿತ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಂತೆ ಪೆಟ್ರೋಲಿಯ ಉತ್ಪನ್ನಗಳ ದರಗಳು ಕೂಡಾ ಸಮನಾಗಿ ಇಳಿಕೆ ಮಾಡುವುದು ಅಗತ್ಯವಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಟೀಕಿಸಿದ್ದಾರೆ.

ಜನಸಾಮಾನ್ಯರನ್ನು ಗಣನೆಗೆ ತೆಗೆದುಕೊಂಡು ಪೆಟ್ರೋಲಿಯಂ ಉತ್ಪನ್ನಗಳ ದರಗಳನ್ನು ಇಳಿಕೆ ಮಾಡುವುದು ಅಗತ್ಯವಾಗಿದೆ ಎಂದು ಜೇಟ್ಲಿ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉತ್ತೇಜನ ಪ್ಯಾಕೇಜ್ ಘೋಷಣೆ ಮುಂದಕ್ಕೆ
ಪೆಟ್ರೋಲ್‌, ಡೀಸೆಲ್ ದರಗಳಲ್ಲಿ ಕಡಿತ
ವೊಡಾಫೋನ್‌ನಿಂದ 10 ಸಾ.ಕೋಟಿ ಪಾವತಿ?
ಉಗ್ರರ ದಾಳಿ: ಸಚಿವ ಜೈರಾಮ್ ಪಾಕ್ ಪ್ರವಾಸ ರದ್ದು
ನಾಳೆ ಪ್ರದಾನಿಯಿಂದ ಪ್ಯಾಕೇಜ್ ಘೋಷಣೆ:ಕಮಲ್‌ನಾಥ್
ಹೊಂಡಾ ಕಂಪೆನಿಯಿಂದ 760 ನೌಕರರ ವಜಾ?