ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್‌ಏರ್‌‌ವೇಸ್‌ನಿಂದ ಇಂಧನ ತೆರಿಗೆ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್‌ಏರ್‌‌ವೇಸ್‌ನಿಂದ ಇಂಧನ ತೆರಿಗೆ ಕಡಿತ
ವೈಮಾನಿಕ ಇಂಧನ ದರ ವ್ಯಾಪಕವಾಗಿ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಿಯ ಹಾರಾಟದ ವಿಮಾನಗಳ ಇಂಧನ ತೆರಿಗೆಯಲ್ಲಿ 400 ರೂಪಾಯಿಗಳನ್ನು ಕಡಿತಗೊಳಿಸಲಾಗಿದ್ದು, ಮೂಲ ಪ್ರಯಾಣ ದರದಲ್ಲಿ ಇಳಿಕೆ ಮಾಡಲಾಗುವುದಿಲ್ಲ ಎಂದು ಜೆಟ್ ಮೂಲಗಳು ತಿಳಿಸಿವೆ.

ಕಳೆದ ಕೆಲ ದಿನಗಳ ಹಿಂದೆ ಏರ್‌ ಇಂಡಿಯಾ ಇಂಧನ ತೆರಿಗೆಯನ್ನು ಕಡಿತಗೊಳಿಸಿದ ನಂತರ ಜೆಟ್ ಏರ್‌ವೇಸ್ ಹಾಗೂ ಜೆಟ್‌ಲೈಟ್ ವೈಮಾನಿಕ ಸಂಸ್ಥೆಗಳು ಇಂಧನ ತೆರಿಗೆಯಲ್ಲಿ 400 ರೂಪಾಯಿ ಕಡಿತಗೊಳಿಸಿವೆ ಎಂದು ಜೆಟ್ ಏರ್‌ಲೈನ್ಸ್ ವಕ್ತಾರರು ತಿಳಿಸಿದ್ದಾರೆ.

ಪ್ರಯಾಣ ದರಗಳಲ್ಲಿ ಇಳಿಕೆಯಾಗುತ್ತದೆ ಎನ್ನುವ ವರದಿಗಳು ಆಧಾರರಹಿತವಾಗಿದ್ದು ಸತ್ಯಕ್ಕೆ ದೂರವಾಗಿವೆ. ಪ್ರಯಾಣ ದರಗಳಲ್ಲಿ ಇಳಿಕೆಯಿಲ್ಲ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ತೈಲ ದರಗಳಲ್ಲಿ ಇಳಿಕೆಯಾಗಿದ್ದರಿಂದ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ಪ್ರಯಾಣ ದರವನ್ನು ಇಳಿಕೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿರುವುದನ್ನು ಸ್ಮರಿಸಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತಷ್ಟು ಕಡಿತ ಸಾಧ್ಯತೆ?
ಉತ್ತೇಜನ ಪ್ಯಾಕೇಜ್ ಘೋಷಣೆ ಮುಂದಕ್ಕೆ
ಪೆಟ್ರೋಲ್‌, ಡೀಸೆಲ್ ದರಗಳಲ್ಲಿ ಕಡಿತ
ವೊಡಾಫೋನ್‌ನಿಂದ 10 ಸಾ.ಕೋಟಿ ಪಾವತಿ?
ಉಗ್ರರ ದಾಳಿ: ಸಚಿವ ಜೈರಾಮ್ ಪಾಕ್ ಪ್ರವಾಸ ರದ್ದು
ನಾಳೆ ಪ್ರದಾನಿಯಿಂದ ಪ್ಯಾಕೇಜ್ ಘೋಷಣೆ:ಕಮಲ್‌ನಾಥ್