ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಾರು ತಯಾರಿಕೆ ಕಂಪೆನಿಗಳಿಗೆ ಸಾಲ ಮಂಜೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾರು ತಯಾರಿಕೆ ಕಂಪೆನಿಗಳಿಗೆ ಸಾಲ ಮಂಜೂರು
ಕಾರು ತಯಾರಿಕೆ ಕಂಪೆನಿಗಳಿಗೆ 15 ರಿಂದ 17 ಬಿಲಿಯನ್ ಡಾಲರ್ ತುರ್ತು ಸಹಾಯ ಧನವನ್ನು ನೀಡಲು ಅಮೆರಿಕ ಸಂಸತ್ತು ಸಮ್ಮತಿಸಿದೆ ಎಂದು ಹಿರಿಯ ಸಂಸದರು ತಿಳಿಸಿದ್ದಾರೆ.

ವಾಹನ ತಯಾರಿಕೆ ಕಂಪೆನಿಗಳು, ಅಮೆರಿಕದ ಸಂಸತ್ತಿಗೆ ಸಹಾಯ ಧನ ನೀಡುವಂತೆ ಯಾಚಿಸಿದ ಹಿನ್ನೆಲೆ ಹಾಗೂ ಕಳೆದ 34 ವರ್ಷಗಳಲ್ಲಿ ಪ್ರಥಮ ಬಾರಿಗೆ 533,000 ಹುದ್ದೆಗಳು ಕಡಿತವಾಗಿದ್ದರಿಂದ ಉತ್ತೇಜನ ಪ್ಯಾಕೇಜ್ ನೀಡಲು ಅಮೆರಿಕ ಸಂಸತ್ತು ನಿರ್ಧಾರಕ್ಕೆ ಬಂದಿದೆ ಶ್ವೇತಭವನದ ಮೂಲಗಳು ತಿಳಿಸಿವೆ

ಜನರಲ್ ಮೊಟಾರ್ಸ್, ಫೋರ್ಡ್‌ ಮೊಟಾರ್ಸ್ ಮತ್ತು ಕ್ರೆಸ್ಲರ್‌ ವಾಹನ ತಯಾರಿಕೆ ಕಂಪೆನಿಗಳು ಸುಮಾರು 34 ಬಿಲಿಯನ್ ಡಾಲರ್‌ ತುರ್ತುಸಹಾಯ ಧನಕ್ಕಾಗಿ ಅಮೆರಿಕ ಸಂಸತ್ತಿಗೆ ಮನವಿ ಮಾಡಿದ್ದವು ಎನ್ನಲಾಗಿದೆ.

ಜನೆವರಿ 20 ರಂದು ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಅಟೋಮೊಬೈಲ್ ಕಂಪೆನಿಗಳಿಗೆ ಮತ್ತಷ್ಟು ಆರ್ಥಿಕ ಸಹಾಯ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಹಿರಿಯ ಸಂಸದ ದಾನಿಯಲ್ ವೆಸ್ಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಟ್‌ಏರ್‌‌ವೇಸ್‌ನಿಂದ ಇಂಧನ ತೆರಿಗೆ ಕಡಿತ
ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತಷ್ಟು ಕಡಿತ ಸಾಧ್ಯತೆ?
ಉತ್ತೇಜನ ಪ್ಯಾಕೇಜ್ ಘೋಷಣೆ ಮುಂದಕ್ಕೆ
ಪೆಟ್ರೋಲ್‌, ಡೀಸೆಲ್ ದರಗಳಲ್ಲಿ ಕಡಿತ
ವೊಡಾಫೋನ್‌ನಿಂದ 10 ಸಾ.ಕೋಟಿ ಪಾವತಿ?
ಉಗ್ರರ ದಾಳಿ: ಸಚಿವ ಜೈರಾಮ್ ಪಾಕ್ ಪ್ರವಾಸ ರದ್ದು