ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂಡಿಗೋ, ಕಿಂಗ್‌ಫಿಶರ್‌ನಿಂದ ಇಂಧನ ತೆರಿಗೆ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡಿಗೋ, ಕಿಂಗ್‌ಫಿಶರ್‌ನಿಂದ ಇಂಧನ ತೆರಿಗೆ ಕಡಿತ
ಏರ್ ಇಂಡಿಯಾ ಮತ್ತು ಜೆಟ್‌ಏರ್‌ವೇಸ್ ಇಂಧನ ತೆರಿಗೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಇಂಡಿಗೋ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್‌ಗಳು ಕೂಡಾ ದೇಶಿಯ ಹಾರಾಟದ ವಿಮಾನಗಳ ಮೇಲೆ 400 ರೂಪಾಯಿಗಳ ಇಂಧನ ತೆರಿಗೆಯನ್ನು ಕಡಿತಗೊಳಿಸಿವೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 6 ರಿಂದ ಅನ್ವಯವಾಗುವಂತೆ ಏರ್‌ಇಂಡಿಯಾ , ಜೆಟ್‌‌ಏರ್‌ವೇಸ್ ಮತ್ತು ಜೆಟ್‌ಲೈಟ್‌ ವೈಮಾನಿಕ ಸಂಸ್ಥೆಗಳಂತೆ ಇಂಡಿಗೋ ಕೂಡಾ ಇಂಧನ ತೆರಿಗೆಯನ್ನು ಕಡಿತಗೊಳಿಸಿದೆ ಎಂದು ಇಂಡಿಗೋ ಅಧ್ಯಕ್ಷ ಆದಿತ್ಯ ಘೋಷ್ ತಿಳಿಸಿದ್ದಾರೆ.

ವೈಮಾನಿಕ ಇಂಧನ ದರ ಇಳಿಕೆಯಾಗಿದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹಿಂದೆ ನೀಡಿದ ಭರವಸೆಯಂತೆ ಇಂಧನ ತೆರಿಗೆಯನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇಂಧನ ತೆರಿಗೆ, 750 ಕಿ.ಮಿ.ಗಿಂತ ದೂರದ ಪ್ರಯಾಣ ಅಥವಾ 2,700 ರೂ.ಪ್ರಯಾಣಿಕ ಟಿಕೆಟ್ ದರಕ್ಕಿಂತ ಹೆಚ್ಚಳದ ಪ್ರಯಾಣಕ್ಕೆ 1,950 ರೂ.ಪ್ರಯಾಣಿಕರ ಟಿಕೆಟ್ ದರದಲ್ಲಿ ಕಡಿಮೆಯಾಗಲಿದೆ ಎಂದು ವೈಮಾನಿಕ ಮೂಲಗಳು ತಿಳಿಸಿವೆ.

ಇಂಡಿಗೋ ವೈಮಾನಿಕ ಸಂಸ್ಥೆ ಏರ್‌ಬಸ್-320 ವಿಮಾನದೊಂದಿಗೆ ದೇಶದಾದ್ಯಂತ 17 ಸ್ಥಳಗಳಿಗೆ 125 ವಿಮಾನಗಳ ಹಾರಾಟ ನಡೆಸುತ್ತಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯ್ ಮಲ್ಯ ಸಂಚಾಲಿತ ಕಿಂಗ್‌ಫಿಶರ್ ಏರ್‌ಲೈನ್ಸ್ ಕೂಡಾ ಇಂಧನ ತೆರಿಗೆಯನ್ನು ಕಡಿತಗೊಳಿಸಿದ್ದರಿಂದ ದೇಶಿಯ ಹಾರಾಟದ ಪ್ರಯಾಣಿಕರಿಗೆ ಪ್ರಯಾಣ ದರದಲ್ಲಿ 400 ರೂಪಾಯಿಗಳಿಗಿಂತ ಕಡಿಮೆಯಾಗಲಿದೆ ಎಂದು ಕಿಂಗ್‌ಫಿಶರ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ ಮೋಟಾರ್ಸ್, ಮಹೀಂದ್ರಾ ಘಟಕಗಳು ಬಂದ್
ಕಾರು ತಯಾರಿಕೆ ಕಂಪೆನಿಗಳಿಗೆ ಸಾಲ ಮಂಜೂರು
ಜೆಟ್‌ಏರ್‌‌ವೇಸ್‌ನಿಂದ ಇಂಧನ ತೆರಿಗೆ ಕಡಿತ
ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತಷ್ಟು ಕಡಿತ ಸಾಧ್ಯತೆ?
ಉತ್ತೇಜನ ಪ್ಯಾಕೇಜ್ ಘೋಷಣೆ ಮುಂದಕ್ಕೆ
ಪೆಟ್ರೋಲ್‌, ಡೀಸೆಲ್ ದರಗಳಲ್ಲಿ ಕಡಿತ