ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ
PTI
ದೇಶದಲ್ಲಿ ನಗದು ಹಣ ಚಲಾವಣೆ ಸುಲಭಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

ರಿಸರ್ವ್ ಬ್ಯಾಂಕ್ ಗವರ್ನರ್ ಡಿ.ಸುಬ್ಬಾರಾವ್ ರೆಪೊ ದರಗಳ ಕಡಿತ ಘೋಷಿಸಿದ ನಂತರ ಮಾತನಾಡಿ, ಕ್ಯಾಶ್ ರಿಸರ್ವ್ ರೇಶಿಯೊ ಮತ್ತು ಎಸ್‌ಎಲ್‌ಆರ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ.

ಡಿಸೆಂಬರ್ 8 ರಿಂದ ರೆಪೊ ದರ ಕಡಿತ ಜಾರಿಗೆ ಬರಲಿದ್ದು, ಬ್ಯಾಂಕ್‌ಗಳನ್ನು ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಕ್ತ ನಿಯಮಗಳನ್ನು ಜಾರಿಗೆ ತಂದಿದೆ. ಕಳೆದ ಜುಲೈ ತಿಂಗಳಿನಿಂದ ಶೇ.3 ರಷ್ಟು ರೆಪೊ ದರವನ್ನು ಕಡಿತಗೊಳಿಸಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ಜುಲೈ 2006ರಲ್ಲಿ ಬದಲಾವಣೆ ಮಾಡಲಾಗಿದ್ದ ರಿವರ್ಸ್ ರೆಪೊ ದರ ಮತ್ತೆ ಇದೀಗ ಬದಲಾವಣೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಕ್ಯಾಶ್ ರಿಸರ್ವ್ ರೇಶಿಯೊ,ಠೇವಣಿಗೆ ಸರಿಯಾದ ಅನುಪಾತದ ಠೇವಣಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಜಮಾವಣೆ ಮಾಡುವುದು ಅಗತ್ಯವಾಗಿದೆ. ವರ್ಷಾಂತ್ಯದೊಳಗೆ ದೇಶದ ಹಣದುಬ್ಬರ ಶೇ.7ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಗವರ್ನರ್ ಸುಬ್ಬಾರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂಡಿಗೋ, ಕಿಂಗ್‌ಫಿಶರ್‌ನಿಂದ ಇಂಧನ ತೆರಿಗೆ ಕಡಿತ
ಟಾಟಾ ಮೋಟಾರ್ಸ್, ಮಹೀಂದ್ರಾ ಘಟಕಗಳು ಬಂದ್
ಕಾರು ತಯಾರಿಕೆ ಕಂಪೆನಿಗಳಿಗೆ ಸಾಲ ಮಂಜೂರು
ಜೆಟ್‌ಏರ್‌‌ವೇಸ್‌ನಿಂದ ಇಂಧನ ತೆರಿಗೆ ಕಡಿತ
ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತಷ್ಟು ಕಡಿತ ಸಾಧ್ಯತೆ?
ಉತ್ತೇಜನ ಪ್ಯಾಕೇಜ್ ಘೋಷಣೆ ಮುಂದಕ್ಕೆ