ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಮಾನಯಾನ ದರ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನಯಾನ ದರ ಇಳಿಕೆ
ಕಿಂಗ್‌ಫಿಶರ್, ಜೆಟ್ ಏರ್‌ವೇಸ್, ಏರ್ ಇಂಡಿಯಾ ಹಾಗೂ ಇಂಡಿಗೊ ವಿಮಾನಯಾನ ಕಂಪೆನಿಗಳು ಸರಜಾರ್ಜ್ ಕಡಿಮೆ ಮಾಡಿದ್ದು, ಇದರಿಂದಾಗಿ ವಿಮಾನ ಪ್ರಯಾಣ ದರ 400ರೂ.ಗಳಷ್ಟು ಇಳಿಕೆಯಾಗಿದೆ.

ವಿವಿಧ ಇಂಧನ ಕಂಪೆನಿಗಳು ಟರ್ಬೈನ್ ಇಂಧನ ದರದಲ್ಲಿ ಸಾಕಷ್ಟು ಕಡಿತ ಮಾಡಿರುವುದನ್ನು ಆಧರಿಸಿ ವಿಮಾನಯಾನ ಕಂಪೆನಿಗಳು ಈ ಮಹತ್ವದ ನಿರ್ಧಾರ ಘೋಷಿಸಿವೆ.

ಸರ್‌ಜಾರ್ಜ್ ಕಡಿತವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಈ ಮೊದಲು ಕಿಂಗ್‌ಫಿಶರ್‌ನಲ್ಲಿ 750ಕಿ.ಮೀ.ದೂರದವರೆಗಿನ ಪ್ರಯಾಣಕ್ಕೆ ರೂ.2250 ನೀಡಬೇಕಿತ್ತು. ಪ್ರಸ್ತುತ ದರ ರೂ.1950ರೂ.ಗೆ ಇಳಿಕೆಯಾಗಿದೆ. 750ಕಿ.ಮೀ.ಮೇಲ್ಪಟ್ಟ ದೂರದ ಪ್ರಯಾಣಕ್ಕೆ ರೂ.2900 ಪಾವತಿಸಬೇಕಿತ್ತು, ಹೊಸ ದರದ ಅನ್ವಯ ರೂ.2700 ಭರಿಸಬೇಕಾಗಿದೆ.

ಏರ್ ಇಂಡಿಯಾ, ಜೆಟ್ ಏರ್ ವೇಸ್ ಮತ್ತು ಜೆಟ್‌ಲೈಟ್ ಪ್ರಯಾಣ ದರವನ್ನು ಸರಿದೂಗುವ ನಿಟ್ಟಿನಲ್ಲಿ ಡಿಸೆಂಬರ್ 6ರಿಂದಲೇ ಅನ್ವಯವಾಗುವಂತೆ ಇಂಡಿಗೋ ಕೂಡ ಸರ್‌ಜಾರ್ಜ್ ದರ ಕಡಿತಗೊಳಿಸುತ್ತಿದೆ ಎಂದು ಇಂಡಿಗೊ ವಿಮಾನಯಾನ ಸಂಸ್ಥೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ
ಇಂಡಿಗೋ, ಕಿಂಗ್‌ಫಿಶರ್‌ನಿಂದ ಇಂಧನ ತೆರಿಗೆ ಕಡಿತ
ಟಾಟಾ ಮೋಟಾರ್ಸ್, ಮಹೀಂದ್ರಾ ಘಟಕಗಳು ಬಂದ್
ಕಾರು ತಯಾರಿಕೆ ಕಂಪೆನಿಗಳಿಗೆ ಸಾಲ ಮಂಜೂರು
ಜೆಟ್‌ಏರ್‌‌ವೇಸ್‌ನಿಂದ ಇಂಧನ ತೆರಿಗೆ ಕಡಿತ
ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತಷ್ಟು ಕಡಿತ ಸಾಧ್ಯತೆ?