ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣಕಾಸು, ಉದ್ಯಮ ಸಂಸ್ಥೆಗಳಿಗೆ 19 ಸಾ.ಕೋಟಿ ನಷ್ಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣಕಾಸು, ಉದ್ಯಮ ಸಂಸ್ಥೆಗಳಿಗೆ 19 ಸಾ.ಕೋಟಿ ನಷ್ಟ
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ದೇಶದ ಪ್ರಮುಖ 10 ಹಣಕಾಸಿನ ಸಂಸ್ಥೆಗಳು 19 ಸಾವಿರ ಕೋಟಿ ರೂ. ನಷ್ಟವನ್ನು ಎದುರಿಸುತ್ತಿವೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಸಾರ್ವಜನಿಕ ಕ್ಷೇತ್ರದ ಐದು ಸಂಸ್ಥೆಗಳು ಹಾಗೂ ಖಾಸಗಿ ಕ್ಷೇತ್ರ ಐದು ಕಂಪೆನಿಗಳು ಒಟ್ಟು 18,923 ಕೋಟಿ ರೂ,ಗಳ ನಷ್ಟ ಎದುರಿಸುತ್ತಿವೆ. ಕಳೆದ ವಾರ 9,64,677 ಕೋಟಿ ರೂ. ನಷ್ಟವನ್ನು ಎದುರಿಸಿದ್ದ ಸಂಸ್ಥೆಗಳು ಮತ್ತೆ ಪ್ರಸಕ್ತ ವಾರದಲ್ಲಿ 9,45,753 ಕೋಟಿ ರೂ.ಗಳ ಆರ್ಥಿಕ ನಷ್ಟ ಅನುಭವಿಸಿವೆ.

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಮಟ್ಟು ಎನ್‌ಟಿಪಿಸಿ ಜಂಟಿಯಾಗಿ 4,456 ಕೋಟಿ ರೂ.ಗಳ ನಷ್ಟ ಎದುರಿಸಿ ಟಾಪ್ 10 ಕಂಪೆನಿಗಳಲ್ಲಿ ಮೊದಲನೆ ಸ್ಥಾನಪಡೆದಿವೆ.ಎನ್‌ಎಂಡಿಸಿ 2,121 ಕೋಟಿ ರೂ.ಗಳ ನಷ್ಟ ಅನುಭವಿಸಿ ಒಂಬತ್ತನೇ ಸ್ಥಾನವನ್ನು ಪಡೆದಿದೆ.

ಟಾಟಾ ಕನ್ಸಲ್‌ಟನ್ಸಿ ಸರ್ವಿಸ್ ವಾರಂತ್ಯದಲ್ಲಿ 3,557 ಕೋಟಿ ರೂ.ಗಳ ನಷ್ಟು ಎದುರಿಸಿ, ಕಂಪೆನಿಯ ಮೌಲ್ಯ 51,054 ಕೋಟಿ.ರೂ.ಗಳಿಗೆ ಇಳಿಕೆಯಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ದೇಶದ ಪ್ರಮುಖ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್ 2,045 ಕೋಟಿ ರೂ.ಗಳ ನಷ್ಟ ಅನುಭವಿಸಿದೆ.ಮುಕೇಶ್ ಅಂಬಾನಿ ನೇತೃ್ತ್ವದ ರಿಲಯನ್ಸ್ ಇಂಡಸ್ಟ್ರೀಸ್ 1,76,044 ಕೋಟಿ. ರೂ.ಗಳ ನಷ್ಟ ಎದುರಿಸಿದೆ ಎಂದು ಮಾರುಕಟ್ಟೆ ತಜ್ಞರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಗಾರದ ಬೆಲೆಯಲ್ಲಿ ಮತ್ತೆ ಕುಸಿತ
ವಿಮಾನಯಾನ ದರ ಇಳಿಕೆ
ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ
ಇಂಡಿಗೋ, ಕಿಂಗ್‌ಫಿಶರ್‌ನಿಂದ ಇಂಧನ ತೆರಿಗೆ ಕಡಿತ
ಟಾಟಾ ಮೋಟಾರ್ಸ್, ಮಹೀಂದ್ರಾ ಘಟಕಗಳು ಬಂದ್
ಕಾರು ತಯಾರಿಕೆ ಕಂಪೆನಿಗಳಿಗೆ ಸಾಲ ಮಂಜೂರು