ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪ್ರಸ್ತುತ ಆದಾಯ ತೆರಿಗೆಯಲ್ಲಿ ಕಡಿತವಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಸ್ತುತ ಆದಾಯ ತೆರಿಗೆಯಲ್ಲಿ ಕಡಿತವಿಲ್ಲ
ವೈಯಕ್ತಿಕ ಆದಾಯ ಮತ್ತು ಕಾರ್ಪೋರೇಟ್‌ ಸಂಸ್ಥೆಗಳ ಮಧ್ಯಂತರ ನೇರ ತೆರಿಗೆಯನ್ನು ಕಡಿತಗೊಳಿಸುವುದನ್ನು ತಳ್ಳಿ ಹಾಕಿದ ಸರಕಾರ, ನೇರ ತೆರಿಗೆ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದು ಹೇಳಿದೆ

ತೆರಿಗೆ ದರ ಕುರಿತಂತೆ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ರವಿವಾರದಂದು ಘೋಷಿಸಲಾದ ಪ್ಯಾಕೇಜ್‌ನಲ್ಲಿ ಅಬಕಾರಿ ತೆರಿಗೆಯನ್ನು ಮಾತ್ರ ಕಡಿತಗೊಳಿಸಲಾಗಿದೆ ಎಂದು ಸಚಿವ ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.

ನೇರ ತೆರಿಗೆ ಬಗ್ಗೆ ಪ್ರಸ್ತುತ ಮಾತನಾಡುವುದು ಅವಸರವಾದಿ ಕಾರ್ಯವಾಗುತ್ತದೆ ಎಂದು ವಿತ್ತ ಸಚಿವಾಲಯದ ಹಣಕಾಸು ಕಾರ್ಯದರ್ಶಿ ಅರುಣ್ ರಾಮನಾಥನ್‌ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರಕಾರ, ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರತುಪಡಿಸಿ ಶೇ4 ರಷ್ಟು ಅಬಕಾರಿ ತೆರಿಗೆಯನ್ನು ಕಡಿತಗೊಳಿಸಿ, ರಫ್ತು ಮತ್ತು ಜವಳಿ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ 20 ಸಾವಿರ ಕೋಟಿ ರೂಪಾಯಿಗಳನ್ನು ಘೋಷಿಸಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿತ್ತ ಸಚಿವ ಸ್ಥಾನ:ಕೃಷ್ಣ,ಸಿಬಲ್ ಮುಂಚೂಣಿಯಲ್ಲಿ
ಆರ್ಥಿಕ ಅಭಿವೃದ್ಧಿ ದರ ಶೇ.7ರಷ್ಟಾಗಲಿದೆ: ಮೊಂಟೆಕ್
ಹಣಕಾಸು, ಉದ್ಯಮ ಸಂಸ್ಥೆಗಳಿಗೆ 19 ಸಾ.ಕೋಟಿ ನಷ್ಟ
ಬಂಗಾರದ ಬೆಲೆಯಲ್ಲಿ ಮತ್ತೆ ಕುಸಿತ
ವಿಮಾನಯಾನ ದರ ಇಳಿಕೆ
ಆರ್‌ಬಿಐನಿಂದ ರೆಪೊ, ರಿವರ್ಸ್ ರೆಪೊ ದರ ಕಡಿತ