ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಅಶ್ವಾಸನೆಗಳು ವಂಚನೆಯ ತಂತ್ರ: ಆರ್ಥಿಕ ತಜ್ಞರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಅಶ್ವಾಸನೆಗಳು ವಂಚನೆಯ ತಂತ್ರ: ಆರ್ಥಿಕ ತಜ್ಞರು
ಜನರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷಗಳು ಪ್ರಣಾಳಿಕೆಯಲ್ಲಿ ಅಶ್ವಾಸನೆಗಳ ಸುರಿಮಳೆಗೈದರೂ ಪ್ರಸಕ್ತ ರಾಜಸ್ಥಾನದಲ್ಲಿರುವ ಆರ್ಥಿಕ ಸ್ಥಿತಿಯಿಂದಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಕೇವಲ ಚುನಾವಣಾ ಪ್ರಚಾರದ ತಂತ್ರವಾಗಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ, ಬಡವರಿಗೆ 2 ರೂ.ಕೆ.ಜಿ ಗೋಧಿ ನೀಡುವುದಾಗಿ ಅಶ್ವಾಸನೆ ನೀಡಿದೆ. ಕಾಂಗ್ರೆಸ್ ಪಕ್ಷ ನಿರುದ್ಯೋಗಿ ಯುವಕರಿಗೆ 10 ಲಕ್ಷ ಸರಕಾರಿ ಹಾಗೂ ಖಾಸಗಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದು, ಪ್ರಸಕ್ತ ಆರ್ಥಿಕ ಸ್ಥಿತಿಯಲ್ಲಿ ಸಾಧ್ಯವಾಗಲಾರದು ಜನತೆಯನ್ನು ವಂಚಿಸುವ ತಂತ್ರವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜಸ್ಥಾನದ ಆರ್ಥಿಕ ತಜ್ಞ ಎಲ್‌.ಎನ್.ನಾಥುರ್‌ಮಕಾ ಪ್ರಕಾರ, ರಾಜಸ್ಥಾನ ಆರ್ಥಿಕ ಭೀತಿಯಿಂದ ಹೊರತಾಗಿಲ್ಲ.ರಾಜಕೀಯ ಪಕ್ಷಗಳು 2ರೂ.ಕೆ.ಜಿ ಗೋಧಿ ನೀಡುವುದಾಗಿ ಹೇಳುತ್ತಿರುವುದು ರಾಜಕೀಯ ಗಿಮಿಕ್‌ ಆಗಿದೆ.ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಪ್ರಭಾವಿಯಾಗಿಲ್ಲ.ರೇಶನ್ ಅಂಗಡಿಗಳ ದ್ವಾರಗಳು ಬಹುತೇಕ ಸಮಯ ಮುಚ್ಚಿರುತ್ತವೆ. ಅಥವಾ ತೆರೆದಿದ್ದರೂ ರಾತ್ರಿ ಪೂರ್ತಿ ಸರದಿಯಲ್ಲಿ ಕಳೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ ದುರ್ಬಲವಾಗಿರುವುದರಿಂದ 2009ರ ಮಾರ್ಚ್ ತಿಂಗಳ ವೇಳೆಗೆ ರಾಜಸ್ಥಾನದ ಆರ್ಥಿಕತೆ 76ಸಾವಿರ ಕೋಟಿಗೆ ತಲುಪಲಿದೆ. ಆರ್ಥಿಕ ಸ್ಥಿತಿಯನ್ನು ಗಮನಿಸಿದಲ್ಲಿ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಮುಂಬರುವ ಸರಕಾರದ ಗುರಿ ಆರ್ಥಿಕತೆಗೆ ಆದ್ಯತೆ ನೀಡುವುದಾಗಿದೆ. 2ರೂ.ಗೆ ಕೆ.ಜಿ ಗೋಧಿಯನ್ನು ನೀಡುವುದು ಸಾಧ್ಯವಿಲ್ಲವಾದ್ದರಿಂದ ರಾಜಕೀಯ ಪಕ್ಷಗಳು ಜನತೆಯನ್ನು ಮರಳುಗೊಳಿಸುವ ತಂತ್ರ ಹೂಡಿದ್ದಾರೆ ಎಂದು ತಿಳಿಸಿದ್ದಾರೆ.

ವಾಣಿಜ್ಯ ನಿರ್ದೇಶಕ ಪಿ.ಕೆ.ಕೊಟಿಯಾ ಮಾತನಾಡಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು ಪ್ರಸಕ್ತ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿದ್ದಪಡಿಸಿರುವುದಿಲ್ಲ. ಜಾಗತಿಕ ಆರ್ಥಿಕತೆ ಕುಸಿತದತ್ತ ಸಾಗುತ್ತಿದೆ. ಪ್ರಣಾಳಿಕೆಯಲ್ಲಿ 2ರೂ.ಕೆ.ಜಿ ಗೋಧಿ ಮತ್ತು ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಅಸಾಧ್ಯದ ಮಾತು ಎಂದು ಹೇಳಿದ್ದಾರೆ.

ರಾಜಸ್ಥಾನ್ ವಿಶ್ವವಿದ್ಯಾಲಯದ ಆರ್ಥಿಕ ವಿಭಾಗದ ಪ್ರೋಫೆಸರ್‌ ಎನ್‌.ಸಿ ಪಹಾರಿಯಾ ಮಾತನಾಡಿ , ಆಂಧ್ರಪ್ರದೇಶ,ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು 2 ರೂಪಾಯಿಗೆ ಕೆ.ಜಿ ಗೋಧಿಯನ್ನು ನೀಡುವಲ್ಲಿ ವಿಫಲವಾಗಿವೆ. ಅಡಳಿತಾತ್ಮಕವಾಗಿ ಸಾಧ್ಯವಿಲ್ಲ.ಆದರೆ ಒಂದು ವೇಳೆ ಜಾರಿಗೆ ತಂದಲ್ಲಿ ದುರುಪಯೋಗವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಮುಂಬರುವ ಎರಡು ವರ್ಷಗಳಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿಕೆ ನೀಡುತ್ತಿರುವ ರಾಜಕೀಯ ಪಕ್ಷಗಳು ಜನತೆಯನ್ನು ವಂಚಿಸುತ್ತಿವೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉದ್ಯೋಗ ಸೃಷ್ಟಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಸ್ತುತ ಆದಾಯ ತೆರಿಗೆಯಲ್ಲಿ ಕಡಿತವಿಲ್ಲ
ವಿತ್ತ ಸಚಿವ ಸ್ಥಾನ:ಕೃಷ್ಣ,ಸಿಬಲ್ ಮುಂಚೂಣಿಯಲ್ಲಿ
ಆರ್ಥಿಕ ಅಭಿವೃದ್ಧಿ ದರ ಶೇ.7ರಷ್ಟಾಗಲಿದೆ: ಮೊಂಟೆಕ್
ಹಣಕಾಸು, ಉದ್ಯಮ ಸಂಸ್ಥೆಗಳಿಗೆ 19 ಸಾ.ಕೋಟಿ ನಷ್ಟ
ಬಂಗಾರದ ಬೆಲೆಯಲ್ಲಿ ಮತ್ತೆ ಕುಸಿತ
ವಿಮಾನಯಾನ ದರ ಇಳಿಕೆ