ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಡಿಪಿ ಹೆಚ್ಚಳಕ್ಕೆ ಸೂಕ್ತ ಕ್ರಮ: ಮೊಂಟೆಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಡಿಪಿ ಹೆಚ್ಚಳಕ್ಕೆ ಸೂಕ್ತ ಕ್ರಮ: ಮೊಂಟೆಕ್
ಮುಂಬರುವ ಆರ್ಥಿಕ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.7ರಷ್ಟಾಗಲಿದ್ದು,ಆರ್ಥಿಕ ಅಭಿವೃದ್ಧಿ ದರ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.

ಮುಂಬರುವ 2008-09 ರ ಸಾಲಿನಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ. 7ಕ್ಕೆ ತಲುಪಿದಲ್ಲಿ ತುಂಬಾ ಸಂತೋಷ. ಲೋಕಸಭೆ ಚುನಾವಣೆಗೆ ಮುನ್ನ ಆರ್ಥಿಕ ಅಭಿವೃದ್ಧಿ ದರವನ್ನು ಹೆಚ್ಚಿಸಲು ಪ್ಯಾಕೇಜ್ ಸೇರಿದಂತೆ ಕೆಲ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮೊಂಟೆಕ್ ತಿಳಿಸಿದ್ದಾರೆ.

ದೇಶದ ಆರ್ಥಿಕತೆ ಜಾಗತಿಕ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. ಆರ್ಥಿಕ ಕುಸಿತವನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಸೂಕ್ತ ಸಮಯದಲ್ಲಿ ಜಾರಿಗೊಳಿಸದಿದ್ದಲ್ಲಿ ಅಭಿವೃದ್ಧಿ ಕುಸಿತವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಆರ್ಥಿಕ ಅಭಿವೃದ್ಧಿ ದರ ಶೇ. 3 ರಿಂದ ಶೇ.2.2ಕ್ಕೆ ಕುಸಿತವಾಗಿದ್ದು,ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟವನ್ನು ಎದುರಿಸಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಇತ್ತೀಚೆಗೆ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾರು, ದ್ವಿಚಕ್ರವಾಹನಗಳ ಮಾರಾಟದಲ್ಲಿ ಕುಸಿತ
ಸೋನಿಯಿಂದ 8 ಸಾವಿರ ಹುದ್ದೆ ಕಡಿತ
ಆರ್ಥಿಕ ಅಶ್ವಾಸನೆಗಳು ವಂಚನೆಯ ತಂತ್ರ: ಆರ್ಥಿಕ ತಜ್ಞರು
ಪ್ರಸ್ತುತ ಆದಾಯ ತೆರಿಗೆಯಲ್ಲಿ ಕಡಿತವಿಲ್ಲ
ವಿತ್ತ ಸಚಿವ ಸ್ಥಾನ:ಕೃಷ್ಣ,ಸಿಬಲ್ ಮುಂಚೂಣಿಯಲ್ಲಿ
ಆರ್ಥಿಕ ಅಭಿವೃದ್ಧಿ ದರ ಶೇ.7ರಷ್ಟಾಗಲಿದೆ: ಮೊಂಟೆಕ್