ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫೋರ್ಡ್ ಇಂಡಿಯಾ ಕಾರುಗಳ ದರದಲ್ಲಿ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೋರ್ಡ್ ಇಂಡಿಯಾ ಕಾರುಗಳ ದರದಲ್ಲಿ ಕಡಿತ
PTI
ಕೇಂದ್ರ ಸರಕಾರ ವ್ಯಾಟ್ ತೆರಿಗೆಯನ್ನು ಶೇ. 4 ರಷ್ಟು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಫೋರ್ಡ್ ಇಂಡಿಯಾ ಲಿಮಿಟೆಡ್ ಕಂಪೆನಿ, ತನ್ನ ಎಲ್ಲ ಕಾರು ಮಾಡೆಲ್‌ಗಳ ಮೇಲೆ ದರ ಕಡಿತ ಮಾಡಿದ್ದು, ಡಿಸೆಬಂರ್ 9 ರಿಂದ ದರ ಕಡಿತ ಜಾರಿಗೆ ಬರಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಫೋರ್ಡ್ ಇಂಡಿಯಾದ ಅಧ್ಯಕ್ಷ ಮಿಖೈಲ್ ಬೊನೆಹ್ಯಾಮ್ ಮಾತನಾಡಿ, ಕೇಂದ್ರ ಸರಕಾರ ವ್ಯಾಟ್ ತೆರಿಗೆಯನ್ನು ಶೇ. 4 ರಷ್ಟು ಕಡಿತಗೊಳಿಸಿದ್ದರಿಂದ ಕಾರುಗಳ ಮಾರಾಟ ದರದಲ್ಲಿ ಇಳಿಕೆ ಮಾಡಲಾಗಿದ್ದು ಅಟೋಮೊಬೈಲ್ ಉದ್ಯಮಕ್ಕೆ ಗ್ರಾಹಕರನ್ನು ಸೆಳೆಯುವ ಅವಕಾಶ ದೊರೆತಂತಾಗಿದೆ ಎಂದು ಹೇಳಿದ್ದಾರೆ.

ಫೋರ್ಡ್ ಇಂಡಿಯಾ ಕಂಪೆನಿ ತನ್ನ ಎಲ್ಲ ಮಾಡೆಲ್‌ ಕಾರುಗಳ ಮೇಲೆ 17,500 ರಿಂದ 54 ಸಾವಿರದವರೆಗೆ ದರ ಕಡಿತ ಮಾಡಲಾಗಿದ್ದು, ಕಡಿದ ದರದ ಮೂಲಕ ಗ್ರಾಹಕರ ವಿಶ್ವಾಸವನ್ನು ಗೆಲ್ಲುವುದು ಅಗತ್ಯವಾಗಿದೆ. ಕಾರುಗಳ ದರಗಳಲ್ಲಿ ಇಳಿಕೆಯಾಗಿದ್ದರಿಂದ ಹೆಚ್ಚಿನ ಗ್ರಾಹಕರು ಕಾರುಗಳನ್ನು ಖರೀದಿಸಬಹುದಾಗಿದೆ ಎಂದು ಬೊನೆಹ್ಯಾಮ್ ತಿಳಿಸಿದ್ದಾರೆ.

1995ರಲ್ಲಿ ಭಾರತದ ತಮಿಳುನಾಡಿನ ಚೆನ್ನೈ ನಗರದಲ್ಲಿ ಸ್ಥಾಪಿಸಲಾದ ಫೋರ್ಡ್ ಘಟಕದಲ್ಲಿ ಸುಮಾರು 2100 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಐಕಾನ್ ಫ್ಯೂಸನ್, ಎಂಡೇವರ್ ಮತ್ತು ಫಿಸ್ಟಾ ಮಾಡೆಲ್‌ಗಳ ಕಾರುಗಳನ್ನು ತಯಾರಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಡಿಪಿ ಹೆಚ್ಚಳಕ್ಕೆ ಸೂಕ್ತ ಕ್ರಮ: ಮೊಂಟೆಕ್
ಕಾರು, ದ್ವಿಚಕ್ರವಾಹನಗಳ ಮಾರಾಟದಲ್ಲಿ ಕುಸಿತ
ಸೋನಿಯಿಂದ 8 ಸಾವಿರ ಹುದ್ದೆ ಕಡಿತ
ಆರ್ಥಿಕ ಅಶ್ವಾಸನೆಗಳು ವಂಚನೆಯ ತಂತ್ರ: ಆರ್ಥಿಕ ತಜ್ಞರು
ಪ್ರಸ್ತುತ ಆದಾಯ ತೆರಿಗೆಯಲ್ಲಿ ಕಡಿತವಿಲ್ಲ
ವಿತ್ತ ಸಚಿವ ಸ್ಥಾನ:ಕೃಷ್ಣ,ಸಿಬಲ್ ಮುಂಚೂಣಿಯಲ್ಲಿ