ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಚಿಂತೆಗಳು ದೂರವಾಗಿಲ್ಲ; ಸೇನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಚಿಂತೆಗಳು ದೂರವಾಗಿಲ್ಲ; ಸೇನ್
ಹಣದುಬ್ಬರ ದರ ಇಳಿಕೆಯಾಗಿರುವುದರಿಂದ ನಾವು ಹಣದುಬ್ಬರ ಬಿಕ್ಕಟ್ಟಿನಿಂದ ಪಾರಾಗಿದ್ದೇವೆ ಎಂದು ಭಾವಿಸುವುದು ಸರಿಯಲ್ಲ ಎಂದು ಭಾರತದ ಮುಖ್ಯ ಲೆಕ್ಕಾಧಿಕಾರಿ ಪ್ರೊಣಬ್ ಸೇನ್ ಹೇಳಿದ್ದಾರೆ.

ದೇಶದ ಹಣದುಬ್ಬರ ದರ ಶೇ.12.82 ರಿಂದ ನವೆಂಬರ್ 22ಕ್ಕೆ ವಾರಂತ್ಯಗೊಂಡಂತೆ ಶೇ.8.40ರಷ್ಟು ಇಳಿಕೆಯಾಗಿದ್ದರಿಂದ ಹಣದುಬ್ಬರದಿಂದ ಹೊರತಾಗಿದ್ದೇವೆ ಎಂದು ನಿಲುವು ತಾಳುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ.

ನಾವು ಈಗ ಹಣದುಬ್ಬರದಿಂದ ಸಂಪೂರ್ಣವಾಗಿ ಹೊರತಾಗಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ಉತ್ಪಾದಕ ಮತ್ತು ಅಹಾರವಸ್ತುಗಳ ದರಗಳಲ್ಲಿ ಹಣದುಬ್ಬರ ಪ್ರಸ್ತುತವು ಮುಂದುವರಿದಿದೆ.ಯಾರಾದರೂ ಹಣದುಬ್ಬರ ಶೇ.3ಕ್ಕೆ ಇಳಿಕೆಯಾಗಲಿ ಅಥವಾ ಅದಕ್ಕಿಂತ ಕಡಿಮೆ ಹಣದುಬ್ಬರವಾಗಲಿ ಎಂದು ಆಶಿಸಿದರೇ ಒಳ್ಳೆಯ ವಿಚಾರ ಎಂದು ಸೇನ್ ಹೇಳಿದರು.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಚಿಲ್ಲರೆ ದರಗಳು ದಾಖಲೆಯ ಏರಿಕೆಯಲ್ಲಿದ್ದು ಅಹಾರ ವಸ್ತುಗಳಲ್ಲಿ ಹಣದುಬ್ಬರವಿದೆ ಎಂದು ರಿಸರ್ವ್ ಬ್ಯಾಂಕ್‌ ಕೂಡಾ ಇತ್ತೀಚೆಗೆ ಹೇಳಿಕೆ ನೀಡಿದೆ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫೋರ್ಡ್ ಇಂಡಿಯಾ ಕಾರುಗಳ ದರದಲ್ಲಿ ಕಡಿತ
ಜಿಡಿಪಿ ಹೆಚ್ಚಳಕ್ಕೆ ಸೂಕ್ತ ಕ್ರಮ: ಮೊಂಟೆಕ್
ಕಾರು, ದ್ವಿಚಕ್ರವಾಹನಗಳ ಮಾರಾಟದಲ್ಲಿ ಕುಸಿತ
ಸೋನಿಯಿಂದ 8 ಸಾವಿರ ಹುದ್ದೆ ಕಡಿತ
ಆರ್ಥಿಕ ಅಶ್ವಾಸನೆಗಳು ವಂಚನೆಯ ತಂತ್ರ: ಆರ್ಥಿಕ ತಜ್ಞರು
ಪ್ರಸ್ತುತ ಆದಾಯ ತೆರಿಗೆಯಲ್ಲಿ ಕಡಿತವಿಲ್ಲ