ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸ್ಕೊಡಾ ಕಾರು ದರಗಳಲ್ಲಿ 51 ಸಾವಿರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಕೊಡಾ ಕಾರು ದರಗಳಲ್ಲಿ 51 ಸಾವಿರ ಕಡಿತ
ಕೇಂದ್ರದಲ್ಲಿ ಅಡಳಿತರೂಢ ಯುಪಿಎ ಸರಕಾರ ವ್ಯಾಟ್‌ ತೆರಿಗೆಯನ್ನು ಶೇ.4ರಷ್ಟು ಕಡಿತಗೊಳಿಸಿದ್ದರಿಂದ ಕಾರುಗಳ ದರಗಳಲ್ಲಿ 51,500 ರೂಪಾಯಿಗಳವರೆಗೆ ಎಲ್ಲ ಮಾಡೆಲ್‌ಗಳ ಮೇಲೆ ಕಡಿತ ಮಾಡಲಾಗಿದೆ ಎಂದು ಸ್ಕೊಡಾ ಕಂಪೆನಿಯ ಮೂಲಗಳುವ ತಿಳಿಸಿವೆ.

ಸರಕಾರ ನೀಡಿದ ವ್ಯಾಟ್‌ ತೆರಿಗೆ ಕಡಿತದ ಲಾಭವನ್ನು ಗ್ರಾಹಕರಿಗೆ ನೀಡಲು 12,500ರಿಂದ 51,500 ರೂಪಾಯಿಗಳವರೆಗೆ ಎಲ್ಲ ಮಾಡೆಲ್‌ಗಳ ಮೇಲೆ ದರ ಕಡಿತ ಮಾಡಲಾಗಿದೆ ಎಂದು ಎಸ್ಕೊಡಾ ಅಡಳಿತ ಮಂಡಳಿಯ ಸದಸ್ಯ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಥಾಮಸ್ ಕುಹೆಲ್ ಹೇಳಿದ್ದಾರೆ.

ಸ್ಕೊಡಾ ಕಂಪೆನಿ ಪ್ರಸ್ತುತ ಎಲ್ಲ ವಿಧದ ಮಾಡೆಲ್‌ಗಳ ಮೇಲೆ ದರ ಕಡಿತದ ವಿವರಗಳನ್ನು ಪರಿಶೀಲಿಸುತ್ತಿದೆ.ಡೀಲರ್‌ಗಳಿಗೆ ಹೊರೆಯಾಗದಂತೆ ಸಂಧಾನದಲ್ಲಿ ತೊಡಗಿದ್ದೇವೆ ಎಂದು ಕುಹೆಲ್ ತಿಳಿಸಿದ್ದಾರೆ.

ಆರ್ಥಿಕವಾಗಿ ಮಾರುಕಟ್ಟೆ ಕುಸಿಯುತ್ತಿರುವುದರಿಂದ ಬೇಡಿಕೆಯಲ್ಲಿ ಇಳಿಮುಖವಾಗಿದ್ದು, ಅಗಸ್ಟ್ ತಿಂಗಳಿನಿಂದ ಕಾರು ತಯಾರಿಕೆಯನ್ನು ಕಡಿತಗೊಳಿಸಲಾಗಿದೆ.ಆದರೆ ಪ್ರಸ್ತುತ ತಿಂಗಳಿನಲ್ಲಿ ಉತ್ಪಾದನೆಯನ್ನು ಕಡಿತಗೊಳಿಸಿಲ್ಲ ಎಂದು ಕುಹೆಲ್ ಹೇಳಿದ್ದಾರೆ.

ಕಾರುಗಳ ದರಗಳನ್ನು ಕಡಿತಗೊಳಿಸಿದ್ದರಿಂದ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಿದ್ದೇವೆ. ನವದೆಹಲಿಯ ಫರಿದಾಬಾದ್‌ನಲ್ಲಿ ಸ್ಕೊಡಾ ಶೋರೂಮ್‌ ಇಂದಿನಿಂದ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ಚಿಂತೆಗಳು ದೂರವಾಗಿಲ್ಲ; ಸೇನ್
ಫೋರ್ಡ್ ಇಂಡಿಯಾ ಕಾರುಗಳ ದರದಲ್ಲಿ ಕಡಿತ
ಜಿಡಿಪಿ ಹೆಚ್ಚಳಕ್ಕೆ ಸೂಕ್ತ ಕ್ರಮ: ಮೊಂಟೆಕ್
ಕಾರು, ದ್ವಿಚಕ್ರವಾಹನಗಳ ಮಾರಾಟದಲ್ಲಿ ಕುಸಿತ
ಸೋನಿಯಿಂದ 8 ಸಾವಿರ ಹುದ್ದೆ ಕಡಿತ
ಆರ್ಥಿಕ ಅಶ್ವಾಸನೆಗಳು ವಂಚನೆಯ ತಂತ್ರ: ಆರ್ಥಿಕ ತಜ್ಞರು