ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಿಪಿಒ ಕ್ಷೇತ್ರಗಳಲ್ಲಿ ಹುದ್ದೆಗಳ ಕಡಿತವಿಲ್ಲ:ನಾಸ್ಕಾಮ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಪಿಒ ಕ್ಷೇತ್ರಗಳಲ್ಲಿ ಹುದ್ದೆಗಳ ಕಡಿತವಿಲ್ಲ:ನಾಸ್ಕಾಮ್
ಆರ್ಥಿಕ ಕುಸಿತವಾಗುತ್ತಿದ್ದರೂ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಹೊರಗುತ್ತಿಗೆ ಸೇವೆ ನೀಡುವ ಬಿಪಿಒಗಳ ಹುದ್ದೆಗಳಲ್ಲಿ ಕಡಿತವಾಗುವ ಸಾಧ್ಯತೆಗಳಿಲ್ಲ ಎಂದು ಸಾಫ್ಟ್‌ವೇರ್ ಮತ್ತು ಬಿಪಿಒ ಕೈಗಾರಿಕೋದ್ಯಮ ಸಂಘ ನಾಸ್ಕಾಮ್ ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆರಿಕ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಆರ್ಥಿಕತೆಯಲ್ಲಿ ಕುಸಿತವಾಗುತ್ತಿರುವುದರಿಂದ ಮುಂಬರುವ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೊರಗುತ್ತಿಗೆ ಸೇವೆ ನೀಡುವ ಬಿಪಿಒಗಳಲ್ಲಿ 2.5 ಲಕ್ಷ ಹುದ್ದೆಗಳು ಕಡಿತವಾಗುವ ನಿರೀಕ್ಷೆಯಿದೆ ಎನ್ನುವ ಮಾಧ್ಯಮಗಳ ಸಮೀಕ್ಷಾ ವರದಿಯನ್ನು ತಳ್ಳಿಹಾಕಿದ ನಾಸ್ಕಾಮ್, ವರದಿಗೆ ತಮ್ಮ ಸಹಮತವಿಲ್ಲ ಎಂದು ಹೇಳಿದೆ.

ಮುಂಬರುವ ವರ್ಷದ ಮುನ್ಸೂಚನೆ ಹಾಗೂ ಬಿಪಿಒಗಳ ಕಾರ್ಯನಿರ್ವಹಣೆಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತಿದ್ದು, ಬೃಹತ್ ಪ್ರಮಾಣದಲ್ಲಿ ಹುದ್ದೆಗಳ ಕಡಿತ ಸತ್ಯಕ್ಕೆ ದೂರವಾದ ಸಂಗತಿ ಎಂದು ನಾಸ್ಕಾಮ್ ತಿಳಿಸಿದೆ.

ಬಿಪಿಒ ಸಂಘದ ಅಧ್ಯಕ್ಷ ಸಮೀರ್ ಚೋಪ್ರಾ, ಆರ್ಥಿಕ ಕುಸಿತದಿಂದಾಗಿ ಬಿಪಿಒಗಳಲ್ಲಿ ಹುದ್ದೆಗಳು ಕಡಿತವಾಗುವ ಸಾಧ್ಯತೆಗಳಿವೆ. ಸರಕಾರಕ್ಕೆ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಾಗಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿಲ್ಲ. ನಷ್ಟವನ್ನು ಭರಿಸಲು ಸುಮಾರು 2.5 ಲಕ್ಷ ಹುದ್ದೆಗಳು ಕಡಿತವಾಗಬಹುದು ಎಂದು ಹೇಳಿಕೆ ನೀಡಿದ ನಂತರ ನಾಸ್ಕಾಮ್ ಪ್ರಕಟಣೆಯೊಂದು ಹೊರಡಿಸಿದೆ.

11 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಬಿಪಿಒ ಕ್ಷೇತ್ರಕ್ಕೆ ಕೇವಲ ಏಳು ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು,ಹುದ್ದೆಗಳ ಕಡಿತವಾಗುವ ಸಾಧ್ಯತೆಗಳಿಲ್ಲ ಎಂದು ನಾಸ್ಕಾಮ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಕೊಡಾ ಕಾರು ದರಗಳಲ್ಲಿ 51 ಸಾವಿರ ಕಡಿತ
ಹಣದುಬ್ಬರ ಚಿಂತೆಗಳು ದೂರವಾಗಿಲ್ಲ; ಸೇನ್
ಫೋರ್ಡ್ ಇಂಡಿಯಾ ಕಾರುಗಳ ದರದಲ್ಲಿ ಕಡಿತ
ಜಿಡಿಪಿ ಹೆಚ್ಚಳಕ್ಕೆ ಸೂಕ್ತ ಕ್ರಮ: ಮೊಂಟೆಕ್
ಕಾರು, ದ್ವಿಚಕ್ರವಾಹನಗಳ ಮಾರಾಟದಲ್ಲಿ ಕುಸಿತ
ಸೋನಿಯಿಂದ 8 ಸಾವಿರ ಹುದ್ದೆ ಕಡಿತ