ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 60 ಸಾವಿರದವರೆಗೆ ವಾಹನಗಳ ದರ ಕಡಿತ:ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
60 ಸಾವಿರದವರೆಗೆ ವಾಹನಗಳ ದರ ಕಡಿತ:ಟಾಟಾ
ಕೇಂದ್ರ ಸರಕಾರ ವ್ಯಾಟ್ ತೆರಿಗೆಯನ್ನು ಶೇ. 4ರಷ್ಟು ಕಡಿತಗೊಳಿಸಿದ ಹಿನ್ನೆಲೆಯಲ್ಲಿ, ದೇಶದ ಖ್ಯಾತ ಅಟೋಮೊಬೈಲ್ ಕಂಪೆನಿ ಟಾಟಾ ಮೋಟಾರ್ಸ್, ವಾಹನಗಳ ಮೇಲೆ 60 ಸಾವಿರದವರೆಗೆ ದರ ಕಡಿತ ಮಾಡಿದೆ ಎಂದು ಟಾಟಾ ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಯಾಣಿಕ ಕಾರುಗಳಾದ ಇಂಡಿಕಾ ಮತ್ತು ಇಂಡಿಗೋ ಫ್ಯಾಮಿಲಿ ಕಾರುಗಳ ದರವನ್ನು 12 ಸಾವಿರದಿಂದ 23ಸಾವಿರದವರೆಗೆ ಕಡಿತ ಮಾಡಲಾಗಿದ್ದು, ವಿವಿಧ ಮಾಡೆಲ್‌ಗಳ ಮೇಲೆ ದರ ಕಡಿತ ಅವಲಂಬಿಸಿದೆ ಎಂದು ಟಾಟಾ ಮೋಟಾರ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಟಾಟಾ ಸಫಾರಿ ಮತ್ತು ಸುಮೋ ಫ್ಯಾಮಿಲಿ ಕಾರುಗಳ ದರವನ್ನು 16 ಸಾವಿರದಿಂದ 36ಸಾವಿರದವರೆಗೆ ಕಡಿತ ಮಾಡಿದೆ. ಲಘು ವಾಣಿಜ್ಯ ವಾಹನಗಳನ್ನು 17ಸಾವಿರ-23ಸಾವಿರದವರೆಗೆ ಹಾಗೂ ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳ ಮೇಲೆ 30ಸಾವಿರದಿಂದ 60 ಸಾವಿರದವರೆಗೆ ಕಡಿತ ಮಾಡಲಾಗಿದೆ ಎಂದು ಟಾಟಾ ಮೋಟಾರ್ಸ್ ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಪಿಒ ಕ್ಷೇತ್ರಗಳಲ್ಲಿ ಹುದ್ದೆಗಳ ಕಡಿತವಿಲ್ಲ:ನಾಸ್ಕಾಮ್
ಸ್ಕೊಡಾ ಕಾರು ದರಗಳಲ್ಲಿ 51 ಸಾವಿರ ಕಡಿತ
ಹಣದುಬ್ಬರ ಚಿಂತೆಗಳು ದೂರವಾಗಿಲ್ಲ; ಸೇನ್
ಫೋರ್ಡ್ ಇಂಡಿಯಾ ಕಾರುಗಳ ದರದಲ್ಲಿ ಕಡಿತ
ಜಿಡಿಪಿ ಹೆಚ್ಚಳಕ್ಕೆ ಸೂಕ್ತ ಕ್ರಮ: ಮೊಂಟೆಕ್
ಕಾರು, ದ್ವಿಚಕ್ರವಾಹನಗಳ ಮಾರಾಟದಲ್ಲಿ ಕುಸಿತ