ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದಲ್ಲಿ ಶೇ.3ರಷ್ಟು ಹುದ್ದೆ ಕಡಿತ: ಯಾಹೂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದಲ್ಲಿ ಶೇ.3ರಷ್ಟು ಹುದ್ದೆ ಕಡಿತ: ಯಾಹೂ
ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಜಾಗತಿಕ ಅಂತರ್ಜಾಲ ಸಂಸ್ಥೆ ಯಾಹೂ, ದೇಶದಲ್ಲಿರುವ ಶೇ. 3ರಷ್ಟು ಉದ್ಯೋಗಿಗಳಿಗೆ ಲೇ ಆಫ್ ನೋಟಿಸ್ ಜಾರಿ ಮಾಡಿದೆ.

ಕಂಪೆನಿಯ ಮೂಲಗಳ ಪ್ರಕಾರ, ಆರ್ಥಿಕತೆ ನಿಧಾನವಾಗಿ ಕುಸಿಯುತ್ತಿರುವುದರಿಂದ ಸ್ಪರ್ಧಾತ್ಮಕ ಕಾರ್ಯನಿರ್ವಹಣೆಗಾಗಿ ದೇಶದಲ್ಲಿರುವ ಶೇ.3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಲಾಗಿದ್ದು, ಉದ್ಯೋಗಿಗಳಿಗೆ ಇಂದು ವಜಾ ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿವೆ.

ದೇಶಧಲ್ಲಿ ಸುಮಾರು 2ಸಾವಿರ ಉದ್ಯೋಗಿಗಳಿದ್ದು, ಕಳಪೆ ಕಾರ್ಯವೈಖರಿ ಹಾಗೂ ಕೆಲ ಉದ್ಯೋಗಿಗಳನ್ನು ಆರ್ಥಿಕ ಕುಸಿತದಿಂದಾಗಿ ವಜಾಗೊಳಿಸುವ ಕಂಪೆನಿಯ ತೀರ್ಮಾನದಿಂದ 40 ಉದ್ಯೋಗಿಗಳು ಕೆಲಸದಿಂದ ವಂಚಿತರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉದ್ಯೋಗದಿಂದ ವಂಚಿತರಾಗುವ ಉದ್ಯೋಗಿಗಳ ಕಾರ್ಯನಿರ್ವಹಣೆಯ ಬಗ್ಗೆ ಶ್ಲಾಘಿಸಿದ ಯಾಹೂ ಕಂಪೆನಿ, ವಜಾಗೊಂಡ ಉದ್ಯೋಗಿಗಳಿಗೆ ಪ್ಯಾಕೇಜ್‌ ಮತ್ತು ಇತರ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸಲು ಪ್ರಯತ್ನಿಸುವುದಾಗಿ ಹೇಳಿಕೆ ನೀಡಿದೆ.

ಯಾಹೂ ಕಂಪೆನಿಯ ಹೆಚ್ಚಿನ ಉದ್ಯೋಗಿಗಳು ಬೆಂಗಳೂರಿನಲ್ಲಿ ಆರ್‌ ಆಂಡ್ ಡಿ ಕೇಂದ್ರಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಯಾಹೂ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
60 ಸಾವಿರದವರೆಗೆ ವಾಹನಗಳ ದರ ಕಡಿತ:ಟಾಟಾ
ಬಿಪಿಒ ಕ್ಷೇತ್ರಗಳಲ್ಲಿ ಹುದ್ದೆಗಳ ಕಡಿತವಿಲ್ಲ:ನಾಸ್ಕಾಮ್
ಸ್ಕೊಡಾ ಕಾರು ದರಗಳಲ್ಲಿ 51 ಸಾವಿರ ಕಡಿತ
ಹಣದುಬ್ಬರ ಚಿಂತೆಗಳು ದೂರವಾಗಿಲ್ಲ; ಸೇನ್
ಫೋರ್ಡ್ ಇಂಡಿಯಾ ಕಾರುಗಳ ದರದಲ್ಲಿ ಕಡಿತ
ಜಿಡಿಪಿ ಹೆಚ್ಚಳಕ್ಕೆ ಸೂಕ್ತ ಕ್ರಮ: ಮೊಂಟೆಕ್