ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮತ್ತಷ್ಟು ಇಳಿಕೆಯಾದ ಹಣದುಬ್ಬರ ದರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತಷ್ಟು ಇಳಿಕೆಯಾದ ಹಣದುಬ್ಬರ ದರ
PTI
ಹಣ್ಣು ತರಕಾರಿಗಳ ದರ ಇಳಿಕೆಯ ಹಿನ್ನೆಲೆಯಲ್ಲಿ ನವೆಂಬರ್ 29ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ದರ ಶೇ.8ಕ್ಕೆ ಕುಸಿತವಾಗಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿದ್ದ ಶೇ.3.89ರಷ್ಟಿದ್ದ ಹಣದುಬ್ಬರ ದರಕ್ಕೆ ಹೋಲಿಸಿದಲ್ಲಿ, ನವೆಂಬರ್ 29ಕ್ಕೆ ವಾರಂತ್ಯಗೊಂಡಂತೆ ಶೇ.8.4ರಷ್ಟಿದ್ದ ಹಣದುಬ್ಬರ ಸಗಟು ದರ ಆಧಾರಿತ ಹಣದುಬ್ಬರ ಶೇ0.4ರಷ್ಟು ಇಳಿಕೆ ಕಂಡಿದೆ.

ಹಣ್ಣು , ತರಕಾರಿ ,ಜವೆ ದಾನ್ಯಗಳ ದರಗಳು ವಾರಂತ್ಯದಲ್ಲಿ ಇಳಿಕೆಯಾಗಿವೆ. ಉತ್ಪಾದಕ ವಸ್ತುಗಳಾದ ಕಚ್ಚಾ ತೈಲ,ಸಾಸಿವೆ ಎಣ್ಣೆ ಸೇರಿದಂತೆ ಮತ್ತಿತರ ವಸ್ತುಗಳ ದರಗಳಲ್ಲಿ ಇಳಿಕೆಯಾಗಿದೆ.

ಅಗಸ್ಟ್ ತಿಂಗಳಲ್ಲಿ ಶೇ.12.82ರಷ್ಟಿದ್ದ ಹಣದುಬ್ಬರ ದರ, ನಿರಂತರ ಇಳಿಕೆಯತ್ತ ಸಾಗಿ ನವೆಂಬರ್ 29ಕ್ಕೆ ವಾರಂತ್ಯಗೊಂಡಂತೆ ಶೇ.8ಕ್ಕೆ ಇಳಿಕೆಯಾಗಿದೆ.

ಪ್ರಸಕ್ತ ವಾರದಲ್ಲಿ ಸಿಮೆಂಟ್, ಮಿಶ್ರಲೋಹರಹಿತ ಅದಿರು ಉತ್ಪನ್ನಗಳ ದರಗಳಲ್ಲಿ ಶೇ.0.1ರಷ್ಟು ವಾರಂತ್ಯದಲ್ಲಿ ಇಳಿಕೆಯಾಗಿದೆ.

ರಾಗಿ ,ಉದ್ದು, ಮೈದಾ ಕೊಬ್ಬರಿ ಎಣ್ಣೆ ಕಾಗದ ಮತ್ತು ಕಾಗದದ ಉತ್ಪನ್ನಗಳು ಪ್ಲ್ಯಾಸ್ಟಿಕ್ ವಸ್ತುಗಳಾದ ಪಿವಿಸಿ ಪೈಪುಗಳು ಮತ್ತಿತರ ಸಂಬಂಧಿತ ವಸ್ತುಗಳ ದರಗಳಲ್ಲಿ ಏರಿಕೆಯಾಗಿವೆ.ಇಂಧನ,ವಿದ್ಯುತ್, ಕೀಲೆಣ್ಣೆ ಸೂಚ್ಯಂಕಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ನವೆಂಬರ್ 29ಕ್ಕೆ ವಾರಂತ್ಯಗೊಂಡಂತೆ ಪ್ರಕಟಿಸಿದ ಹಣದುಬ್ಬರ ಅಂಕಿಸಂಖ್ಯೆಗಳಲ್ಲಿ , ಸರಕಾರ ಇತ್ತೀಚೆಗೆ ಪೆಟ್ರೋಲ್‌ಗೆ 5 ರೂಪಾಯಿ ಹಾಗೂ ಡೀಸೆಲ್‌ಗೆ 2 ರೂಪಾಯಿ ಕಡಿತಗೊಳಿಸಿರುವುದು, ಆರ್ಥಿಕ ಸುಧಾರಣೆ ಅಂಗವಾಗಿ ಉತ್ತೇಜನ ಪ್ಯಾಕೇಜ್‌ನಲ್ಲಿ ಅಬಕಾರಿ ತೆರಿಗೆ ಕಡಿತ ಮಾಡಿರುವುದು ಸೇರ್ಪಡೆಗೊಳಿಸಿಲ್ಲ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರದಲ್ಲಿ ಬಡ್ಡಿ ದರ ಪರಿಶೀಲನೆ: ಎಸ್‌ಬಿಐ
ಭಾರತದಲ್ಲಿ ಶೇ.3ರಷ್ಟು ಹುದ್ದೆ ಕಡಿತ: ಯಾಹೂ
60 ಸಾವಿರದವರೆಗೆ ವಾಹನಗಳ ದರ ಕಡಿತ:ಟಾಟಾ
ಬಿಪಿಒ ಕ್ಷೇತ್ರಗಳಲ್ಲಿ ಹುದ್ದೆಗಳ ಕಡಿತವಿಲ್ಲ:ನಾಸ್ಕಾಮ್
ಸ್ಕೊಡಾ ಕಾರು ದರಗಳಲ್ಲಿ 51 ಸಾವಿರ ಕಡಿತ
ಹಣದುಬ್ಬರ ಚಿಂತೆಗಳು ದೂರವಾಗಿಲ್ಲ; ಸೇನ್