ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮುಂದಿನ ವಾರದಲ್ಲಿ 2ನೇ ಪ್ಯಾಕೇಜ್ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂದಿನ ವಾರದಲ್ಲಿ 2ನೇ ಪ್ಯಾಕೇಜ್ ಘೋಷಣೆ
ಮೊದಲನೇ ಹಂತದ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗದ ಕ್ಷೇತ್ರಗಳಿಗೆ ಮುಂದಿನ ವಾರದಲ್ಲಿ ಕೇಂದ್ರ ಸರಕಾರ ಘೋಷಿಸಲಿರುವ ಪ್ಯಾಕೇಜ್‌ನಲ್ಲಿ ಅವಕಾಶ ನೀಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾಥ್ ಘೋಷಿಸಿದ್ದಾರೆ.

ಪ್ರಥಮಿಕ ಕ್ಷೇತ್ರಗಳಾದ ಇಂಜಿನಿಯಂರಿಂಗ್, ಜವಳಿ ಮತ್ತು ಕೃಷಿ ಕ್ಷೇತ್ರಗಳು ಎರಡನೇ ಹಂತದ ಪ್ಯಾಕೇಜ್‌ನಲ್ಲಿ ಆದ್ಯತೆ ದೊರೆಯಬಹುದಾಗಿದೆ. ರಫ್ತು ಉದ್ಯಮಕ್ಕೆ ಮರು ಆರ್ಥಿಕ ವ್ಯವಸ್ಥೆ ಯೋಜನೆ ಕೂಡಾ ಪ್ಯಾಕೇಜ್‌ನಲ್ಲಿ ಅಳವಡಿಸಲಾಗಿದೆ ಎಂದು ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.

ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ಪ್ಯಾಕೇಜ್ ಅಂತಿಮವಲ್ಲ. ಹಂತ ಹಂತವಾಗಿ ಅಗತ್ಯಕ್ಕೆ ತಕ್ಕಂತೆ ಪ್ಯಾಕೇಜ್‌ಗಳನ್ನು ಘೋಷಿಸಲಾಗುವುದು ಎಂದು ಮೊದಲ ಹಂತದ ಪ್ಯಾಕೇಜ್ ಘೋಷಿಸುವ ಮುನ್ನ ಸಚಿವ ಕಮಲ್‌ನಾಥ್ ಉದ್ಯಮ ಸಮುದಾಯಕ್ಕೆ ಅಶ್ವಾಸನೆ ನೀಡಿದ್ದರು.

ಕೇಂದ್ರ ಸರಕಾರ ಮೊದಲ ಹಂತದ ಉತ್ತೇಜನ ಪ್ಯಾಕೇಜ್‌ನಲ್ಲಿ ಹೆಚ್ಚುವರಿ ವೆಚ್ಚ ಮತ್ತು ಅಬಕಾರಿ ತೆರಿಗೆ ಕಡಿತಗೊಳಿಸುವು ಗುರಿಯನ್ನಿಟ್ಟುಕೊಂಡು 30,700 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿತ್ತು.

ಕೇಂದ್ರ ಸರಕಾರ ಘೋಷಿಸಿದ ಪ್ಯಾಕೇಜ್ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದ ಭಾರತೀಯ ಕಂಪೆನಿಗಳು ಮತ್ತಷ್ಟು ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದವು ಎಂದು ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತಷ್ಟು ಇಳಿಕೆಯಾದ ಹಣದುಬ್ಬರ ದರ
ಶೀಘ್ರದಲ್ಲಿ ಬಡ್ಡಿ ದರ ಪರಿಶೀಲನೆ: ಎಸ್‌ಬಿಐ
ಭಾರತದಲ್ಲಿ ಶೇ.3ರಷ್ಟು ಹುದ್ದೆ ಕಡಿತ: ಯಾಹೂ
60 ಸಾವಿರದವರೆಗೆ ವಾಹನಗಳ ದರ ಕಡಿತ:ಟಾಟಾ
ಬಿಪಿಒ ಕ್ಷೇತ್ರಗಳಲ್ಲಿ ಹುದ್ದೆಗಳ ಕಡಿತವಿಲ್ಲ:ನಾಸ್ಕಾಮ್
ಸ್ಕೊಡಾ ಕಾರು ದರಗಳಲ್ಲಿ 51 ಸಾವಿರ ಕಡಿತ