ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಎಸ್‌ಎಂ ಗ್ರಾಹಕರ ಸಂಖ್ಯೆ 7 ಮಿಲಿಯನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಎಸ್‌ಎಂ ಗ್ರಾಹಕರ ಸಂಖ್ಯೆ 7 ಮಿಲಿಯನ್
ದೇಶದಾದ್ಯಂತ ನವೆಂಬರ್ ತಿಂಗಳಿನಲ್ಲಿ 7 ಮಿಲಿಯನ್ ಜಿಎಸ್‌‌ಎಂ ಗ್ರಾಹಕರ ಸೇರ್ಪಡೆಯಾಗಿದ್ದು, ಭಾರ್ತಿ ಏರ್‌ಟೆಲ್ 2.7 ಮಿಲಿಯನ್ ಗ್ರಾಹಕರನ್ನು ಸೆಳೆದು ಮುಂಚೂಣಿಯಲ್ಲಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.

ದೇಶದ ಒಟ್ಟು ಜಿಎಸ್‌ಎಂ ಗ್ರಾಹಕರ ಸಂಖ್ಯೆ249.3 ಮಿಲಿಯನ್‌ಗೆ ತಲುಪಿದೆ ಎಂದು ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರ್ತಿ ಏರ್‌ಟೆಲ್ ಕಂಪೆನಿ 2.7 ಮಿಲಿಯನ್ ಜಿಎಸ್‌ಎಂ ಗ್ರಾಹಕರ ಸಂಖ್ಯೆಯನ್ನು ಸೇರ್ಪಡೆಗೊಳಿಸಿ ಶೇ.32ರಷ್ಟು ಮಾರುಕಟ್ಟೆ ಶೇರುಗಳನ್ನು ಹೊಂದಿದೆ. ವೊಡಾಫೋನ್ ಎಸ್ಸಾರ್ 2 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಜಿಎಸ್‌ಎಂನ 6 ಲಕ್ಷ ಗ್ರಾಹಕರಿದ್ದು,ಪ್ರಮುಖ ಕಂಪೆನಿಯಾದ ಎಂಟಿಎನ್‌ಎಲ್ 77,398 ಗ್ರಾಹಕರನ್ನು ಹೊಂದಿದೆ.

ಐಡಿಯಾ ಸೆಲ್ಯೂಲರ್ ,ಬಿಪಿಎಲ್‌, ಸ್ಪೈಸ್ ಮತ್ತು ಏರ್‌ಸೆಲ್ ಕಂಪೆನಿಗಳು ಕೂಡಾ ಜಿಎಸ್‌ಎಂ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ದೇಶದಲ್ಲಿ ಮೊಬೈಲ್ ಉಪಯೋಗಿಸುುವ ಸಂಖ್ಯೆ 325 ಮಿಲಿಯನ್ ಗಡಿ ದಾಟಿದ್ದು, ಜಿಎಸ್‌ಎಂ ಮತ್ತು ಸಿಡಿಎಂಎ ಉಪಯೋಗಿಸುವವರ ಸಂಖ್ಯೆ 10.412 ಮಿಲಿಯನ್‌ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂದಿನ ವಾರದಲ್ಲಿ 2ನೇ ಪ್ಯಾಕೇಜ್ ಘೋಷಣೆ
ಮತ್ತಷ್ಟು ಇಳಿಕೆಯಾದ ಹಣದುಬ್ಬರ ದರ
ಶೀಘ್ರದಲ್ಲಿ ಬಡ್ಡಿ ದರ ಪರಿಶೀಲನೆ: ಎಸ್‌ಬಿಐ
ಭಾರತದಲ್ಲಿ ಶೇ.3ರಷ್ಟು ಹುದ್ದೆ ಕಡಿತ: ಯಾಹೂ
60 ಸಾವಿರದವರೆಗೆ ವಾಹನಗಳ ದರ ಕಡಿತ:ಟಾಟಾ
ಬಿಪಿಒ ಕ್ಷೇತ್ರಗಳಲ್ಲಿ ಹುದ್ದೆಗಳ ಕಡಿತವಿಲ್ಲ:ನಾಸ್ಕಾಮ್