ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸ್ಯಾಮ್‌ಸಂಗ್‌ನಿಂದ 10 ಸಾವಿರದವರೆಗೆ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಯಾಮ್‌ಸಂಗ್‌ನಿಂದ 10 ಸಾವಿರದವರೆಗೆ ದರ ಕಡಿತ
ನವದೆಹಲಿ : ಕೇಂದ್ರ ಸರಕಾರ ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಗೃಹಪಯೋಗಿ ಉಪಕರಣಗಳ ತಯಾರಿಕೆ ಸಂಸ್ಥೆಯಾದ ಸ್ಯಾಮ್‌ಸಂಗ್, ತನ್ನ ಎಲ್ಲ ಉತ್ಪನ್ನಗಳ ಮೇಲೆ 10 ಸಾವಿರದವರೆಗೆ ಕಡಿತ ಮಾಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕೊರಿಯನ್ ಮೂಲದ ಕಂಪೆನಿಯಾದ ಸ್ಯಾಮ್‌ಸಂಗ್ 22 ಇಂಚ್‌ ಎಲ್‌ಸಿಡಿ ಟಿ.ವಿಗೆ 500 ರೂಪಾಯಿ ದರ ಕಡಿತ, 52 ಇಂಚ್‌ಗೆ 1 ಸಾವಿರ ಮತ್ತು ಪ್ಲಾಸ್ಮಾ ಟಿ.ವಿಗೆ 1 ಸಾವಿರ ರೂಪಾಯಿಗಳಿಂದ 6 ಸಾವಿರ ರೂಪಾಯಿಗಳವರೆಗೆ ಕಡಿತ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ರಿಪ್ರಿಜರೇಟರ್‌ ದರಗಳ ಮೇಲೆ ಶೇ 2ರಷ್ಟು ಕಡಿತ ಮಾಡಿದ್ದು,ಗ್ರಾಹಕರಿಗೆ ಮೂಲದರದಿಂದ 50 ರೂಪಾಯಿಗಳಿಂದ 250 ರೂಪಾಯಿಗಳವರೆಗೆ ಕಡಿತವಾಗಲಿದೆ.

ಸ್ಯಾಮ್‌ಸಂಗ್, ಭಾರ್ತಿ ಏರ್‌ಟೆಲ್‌ ಡಿಟಿಎಚ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಎಲ್‌ಸಿಡಿ ಅಥವಾ ಪ್ಲಾಸ್ಮಾ ಟಿ.ವಿ ಜೊತೆಗೆ ಡಿಟಿಎಚ್ ಸೌಲಭ್ಯ ನೀಡುವುದಾಗಿ ಪ್ರಕಟಿಸಿದೆ.

ಸ್ಯಾಮ್‌ಸಂಗ್ ಪ್ಯಾನೆಲ್ ಟಿ.ವಿ ಖರೀದಿಸುವ ಗ್ರಾಹಕರಿಗೆ ಏರ್‌ಟೆಲ್ ಡಿಟಿಎಚ್‌ ಸೆಟಪ್ ಬಾಕ್ಸ್ ಮತ್ತು ಐದು ತಿಂಗಳ ಉಚಿತ ಚಂದಾದಾರರಾಗುವ ಸೌಲಭ್ಯ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಎಸ್‌ಎಂ ಗ್ರಾಹಕರ ಸಂಖ್ಯೆ 7 ಮಿಲಿಯನ್
ಮುಂದಿನ ವಾರದಲ್ಲಿ 2ನೇ ಪ್ಯಾಕೇಜ್ ಘೋಷಣೆ
ಮತ್ತಷ್ಟು ಇಳಿಕೆಯಾದ ಹಣದುಬ್ಬರ ದರ
ಶೀಘ್ರದಲ್ಲಿ ಬಡ್ಡಿ ದರ ಪರಿಶೀಲನೆ: ಎಸ್‌ಬಿಐ
ಭಾರತದಲ್ಲಿ ಶೇ.3ರಷ್ಟು ಹುದ್ದೆ ಕಡಿತ: ಯಾಹೂ
60 ಸಾವಿರದವರೆಗೆ ವಾಹನಗಳ ದರ ಕಡಿತ:ಟಾಟಾ