ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೈಗಾರಿಕಾ ಅಭಿವೃದ್ಧಿಯಲ್ಲಿ ಶೇ.3.4ರಷ್ಟು ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೈಗಾರಿಕಾ ಅಭಿವೃದ್ಧಿಯಲ್ಲಿ ಶೇ.3.4ರಷ್ಟು ಕುಸಿತ
ಕಚ್ಚಾ ತೈಲ ಹಾಗೂ ಉಕ್ಕು ಉತ್ಪಾದನೆ ಕಡಿತಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಶೇ.4.6 ರಷ್ಟಿದ್ದ ಕೈಗಾರಿಕೆ ಅಭಿವೃದ್ಧಿ ದರ ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಶೇ.3.4ಕ್ಕೆ ಕುಸಿತಗೊಂಡಿದೆ ಎಂದು ಕೈಗಾರಿಕೆ ಮೂಲಗಳು ತಿಳಿಸಿವೆ.

ಕೈಗಾರಿಕೆ ಅಭಿವೃದ್ಧಿಯಲ್ಲಿ ಮೂಲ ಪಾತ್ರವಹಿಸುವ ಕಚ್ಚಾ ತೈಲ, ಪೆಟ್ರೋಲಿಯಂ,ಸಂಸ್ಕರಿತ ಉತ್ಪನ್ನಗಳು, ಕಲ್ಲಿದ್ದಲು ,ವಿದ್ಯುತ್, ಸಿಮೆಂಟ್ ಮತ್ತು ಉಕ್ಕು ಉತ್ಪಾದನೆಗಳಲ್ಲಿ ಕುಂಠಿತವಾಗಿದ್ದರಿಂದ ಕಳೆದ ವರ್ಷ ಶೇ.6.6 ರಷ್ಟಿದ್ದ ಕೈಗಾರಿಕೆ ಅಭಿವೃದ್ಧಿ ದರ ಶೇ.3.9ಕ್ಕೆ ಇಳಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಗಸ್ಟ್‌ ತಿಂಗಳಿನಲ್ಲಿ ಶೇ.2.3ರಷ್ಟು ಕುಸಿತ ಕಂಡಿದ್ದ ಕೈಗಾರಿಕೆ ಅಭಿವೃದ್ಧಿ ದರ, ಸೆಪ್ಟೆಂಬರ್ ತಿಂಗಳಿನಲ್ಲಿ ಶೇ5.1ಕ್ಕೆ ಏರಿಕೆಯಾಗಿ ಕೈಗಾರಿಕೆ ಅಭಿವೃದ್ಧಿ ಏರಿಕೆಯತ್ತ ಸಾಗಿತ್ತು. ಆದರೆ ಅಕ್ಟೋಬರ್ ತಿಂಗಳಿನಲ್ಲಿ ಕೈಗಾರಿಕೆ ವಿಸ್ತರಣೆ ಶೇ.3.4ಕ್ಕೆ ಇಳಿಕೆಯಾಗುವುದರೊಂದಿಗೆ ನಿರಾಶೆ ಮೂಡಿಸಿದೆ ಎಂದು ಕೈಗಾರಿಕೆ ಮೂಲಗಳು ತಿಳಿಸಿವೆ.

ಅಕ್ಟೋಬರ್ ತಿಂಗಳಿನಲ್ಲಿ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಉತ್ಪಾದನೆ ಶೇ.0.3ರಷ್ಟು ಇಳಿಕೆಯಾಗಿತ್ತು. ಉಕ್ಕು ಮತ್ತು ಪೆಟ್ರೋಲ್ ಉತ್ಪಾದನೆ ಕ್ರಮವಾಗಿ ಶೇ.0.5, ಶೇ.2.7 ರಷ್ಟು ಕುಸಿತಗೊಂಡಿತ್ತು ಎಂದು ಕೈಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಯಾಮ್‌ಸಂಗ್‌ನಿಂದ 10 ಸಾವಿರದವರೆಗೆ ದರ ಕಡಿತ
ಜಿಎಸ್‌ಎಂ ಗ್ರಾಹಕರ ಸಂಖ್ಯೆ 7 ಮಿಲಿಯನ್
ಮುಂದಿನ ವಾರದಲ್ಲಿ 2ನೇ ಪ್ಯಾಕೇಜ್ ಘೋಷಣೆ
ಮತ್ತಷ್ಟು ಇಳಿಕೆಯಾದ ಹಣದುಬ್ಬರ ದರ
ಶೀಘ್ರದಲ್ಲಿ ಬಡ್ಡಿ ದರ ಪರಿಶೀಲನೆ: ಎಸ್‌ಬಿಐ
ಭಾರತದಲ್ಲಿ ಶೇ.3ರಷ್ಟು ಹುದ್ದೆ ಕಡಿತ: ಯಾಹೂ