ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜ.15 ರಂದು ಆನ್‌ಲೈನ್‌ನಲ್ಲಿ 3ಜಿ ಸ್ಪೆಕ್ಟ್ರಂ ಹರಾಜು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜ.15 ರಂದು ಆನ್‌ಲೈನ್‌ನಲ್ಲಿ 3ಜಿ ಸ್ಪೆಕ್ಟ್ರಂ ಹರಾಜು
ದೇಶದಲ್ಲಿ 3ಜಿ ಸ್ಪೆಕ್ಟ್ರಂ ಸೇವೆಯನ್ನು ಉದ್ಘಾಟಿಸಲಾಗಿದ್ದು, ಮುಂದಿನ ತಿಂಗಳು ಹರಾಜು ಪ್ರಕ್ರಿಯೆ ನಡೆಯುವುದರಿಂದ, ಡಿಸೆಂಬರ್ 23 ರಂದು ಪೂರ್ವಭಾವಿಯಾಗಿ ಬಿಡ್‌ದಾರರ ಸಭೆಯನ್ನು ಕರೆಯಲಾಗಿದೆ ಎಂದು ಟೆಲಿಕಾಂ ಇಲಾಖೆ ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಗುರುವಾರದಂದು ಎಂಟಿಎನ್‍‌ಎಲ್ 3ಜಿ ಸ್ಪೆಕ್ಟ್ರಂ ಸೇವೆಯನ್ನು ಉದ್ಘಾಟಿಸಿದ್ದು, ಜನೆವರಿ 15 ರಂದು ಆನ್‌ಲೈನ್‌ನಲ್ಲಿ ಹರಾಜ್ ಆರಂಭವಾಗಲಿದೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಸ್‌ಮಸ್ ರಜೆಯ ಅವಧಿಯಾಗಿದ್ದರಿಂದ ಡಿಸೆಂಬರ್ 23 ರಂದು ಕರೆಯಲಾಗಿದ್ದ ಬಿಡ್‌ದಾರರ ಸಭೆಯನ್ನು ಮುಂದೂಡುವಂತೆ ಕೆಲ ಉದ್ಯಮಿಗಳು ಸಲಹೆ ನೀಡಿದ್ದು, ಜನೆವರಿ 15ರಂದು ಇ-ಹರಾಜ್ ಮಾಡಲಾಗುವುದು. 3ಜಿ ಸ್ಪೆಕ್ಟ್ರಂಗಾಗಿ 2,020 ಕೋಟಿ ರೂ.ಗಳ ಮೀಸಲು ದರವನ್ನು ನಿಗದಿಪಡಿಸಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಸಿದ್ಧಾರ್ಥ್ ಬೆಹುರಾ ತಿಳಿಸಿದ್ದಾರೆ.

3ಜಿ ಸ್ಪೆಕ್ಟ್ರಂ ಸೇವೆಯನ್ನು ಆರಂಭಿಸುವುದರೊಂದಿಗೆ 3ಜಿ ತಾಂತ್ರಿಕತೆಯನ್ನು ಹೊಂದಿದ ರಾಷ್ಟ್ರಗಳ ಸಾಲಿಗೆ ನೂತನವಾಗಿ ಭಾರತ ಸೇರ್ಪಡೆಯಾದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್‌‌ಗಳಿಗೆ ತಲಾ ಒಂದು 3ಜಿ ಸ್ಪೆಕ್ಟ್ರಂಗಳನ್ನು ನೀಡಲಾಗಿದ್ದು, ಉಭಯ ಕಂಪೆನಿಗಳ ವೃತ್ತದಲ್ಲಿ ಅತಿ ಹೆಚ್ಚು ಬಿಡ್ ಪಾವತಿಸುವ ಬಿಡ್‌ದಾರರಿಗೆ ಅನುಮತಿ ದೊರೆಯಲಿದೆ. ಹರಾಜಿನಲ್ಲಿ ಖಾಸಗಿ ಹಾಗೂ ವಿದೇಶಿ ಕಂಪೆನಿಗಳು ಭಾಗವಹಿಸಲಿವೆ ಎಂದು ಸಿದ್ಧಾರ್ಥ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2011-12ರ ವೇಳೆಗೆ ಉಕ್ಕು ಉತ್ಪಾದನೆ ದ್ವಿಗುಣ
ಕೈಗಾರಿಕಾ ಅಭಿವೃದ್ಧಿಯಲ್ಲಿ ಶೇ.3.4ರಷ್ಟು ಕುಸಿತ
ಸ್ಯಾಮ್‌ಸಂಗ್‌ನಿಂದ 10 ಸಾವಿರದವರೆಗೆ ದರ ಕಡಿತ
ಜಿಎಸ್‌ಎಂ ಗ್ರಾಹಕರ ಸಂಖ್ಯೆ 7 ಮಿಲಿಯನ್
ಮುಂದಿನ ವಾರದಲ್ಲಿ 2ನೇ ಪ್ಯಾಕೇಜ್ ಘೋಷಣೆ
ಮತ್ತಷ್ಟು ಇಳಿಕೆಯಾದ ಹಣದುಬ್ಬರ ದರ