ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆಟೋ ಉದ್ದಿಮೆಗಳಿಗೆ ಒಬಾಮ ತರಾಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಟೋ ಉದ್ದಿಮೆಗಳಿಗೆ ಒಬಾಮ ತರಾಟೆ
ಅಮೆರಿಕ ಆಟೋಮೊಬೈಲ್ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲಗೊಂಡಿದ್ದು, ಹೊಸ ವಾಣಿಜ್ಯ ನೀತಿ ಮತ್ತು ತಾಂತ್ರಿಕತೆಯಿಂದ ಬಹುಬೇಗನೆ ವಾಹನ ತಯಾರಿಕಾ ಸಂಸ್ಥೆಗಳು ಸ್ಫರ್ಧಾತ್ಮಕವಾಗುವಂತೆ, ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಅಮೆರಿಕ ಆರ್ಥಿಕತೆಯನ್ನು ನಿಭಾಯಿಸಲು ಯತ್ನಿಸುತ್ತಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮಾ ಸಲಹೆ ನೀಡಿದರು.

ಬೃಹತ್ಪ್ರಮಾಣದ ವಾಹನ ಉದ್ದಿಮೆಯನ್ನು ತರಾಟೆಗೆ ತೆಗೆದುಕೊಂಡ ಒಬಾಮಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸವಾಲುಗಳನ್ನು ತಕ್ಷಣದಲ್ಲಿ ಸಮರ್ಥವಾಗಿ ಎದುರಿಸಲು ಉದ್ದಿಮೆಗಳು ವಿಫವಾಗಿವೆ ಎಂದು ನುಡಿದರು. ಕೈಗಾರಿಕಾ ಉದ್ದಿಮೆಯ ಪತನವನ್ನು ರಾಷ್ಟ್ರವು ಕೈಕಟ್ಟಿ ನೋಡಲಾಗದು ಎಂದು ನುಡಿದರು.

ಕ್ಷಿಪ್ರವಾಗಿ ಉದ್ದಿಮೆಗಳು ತಮ್ಮ ಗುರಿಯತ್ತ ಸಾಗಲು ವಿಫಲವಾಗಿರುವುದರಿಂದ ಈ ಸಂದರ್ಭದಲ್ಲಿ ಕೈಗಾರಿಕಾ ಉದ್ಯಮದ ಪತನವು ನಮ್ಮ ಮುಂದಿರುವ ಅತೀ ದೊಡ್ಡ ಆರ್ಥಿಕ ಸವಾಲಾಗಿದ್ದು, ಉದ್ದಿಮೆಯ ಕುಸಿತವನ್ನು ಸುಮ್ಮನೆ ನಿಂತು ನೋಡಲಾಗದು ಮತ್ತು ಹಾಗೆ ಮೂಡಿದಲ್ಲಿ ಅದು ನಮ್ಮ ಆರ್ಥಿಕತೆಗೆಯ ಮೇಲೆ ವಿಕೋಪದ ಪರಿಣಾಮ ಬೀರಲಿದೆ ಎಂದು ನುಡಿದರು.

ಅಮೆರಿಕ ಆರ್ಥಿಕತೆಯ ಬಗ್ಗೆ ಪ್ರಚಲಿತದಲ್ಲಿರುವ ನಿರುದ್ಯೋಗ ಅಪಾದನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಒಬಾಮ, ಕಳೆದ 26 ವರ್ಷಗಳಲ್ಲೆ ಪ್ರಸ್ತುತ ವರ್ಷದಲ್ಲಿ ಅಮೆರಿಕದಲ್ಲಿ ನಿರುದ್ಯೋಗಿಗಳು ಅಧಿಕವಿದ್ದು, 570,000 ಮಂದಿಗೆ ನಿರುದ್ಯೋಗ ಅನುಕೂಲಗಳನ್ನು ಪಡೆಯಲು ಮುಂದಾಗಿದ್ದಾರೆ.

ತೆರಿಗೆದಾರರ ಹಿತಾಸಕ್ತಿಯ ರಕ್ಷಣೆ ಮತ್ತು ಕಂಪೆನಿಗಳು ಉತ್ತರದಾಯಿಯಾಗಿರಲು ವಾಹನ ತಯಾರಿಕಾ ಉದ್ದಿಮೆಯ ಪತನವನ್ನು ತಡೆಗಟ್ಟಲು ಅಮೆರಿಕ ಸರಕಾರವು ಅಲ್ಪಾವಧಿಯ ನೆರವನ್ನು ನೀಡುವ ಅಗತ್ಯವಿದೆ ಎಂದು ಒಬಾಮ ಅಭಿಪ್ರಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜ.15 ರಂದು ಆನ್‌ಲೈನ್‌ನಲ್ಲಿ 3ಜಿ ಸ್ಪೆಕ್ಟ್ರಂ ಹರಾಜು
2011-12ರ ವೇಳೆಗೆ ಉಕ್ಕು ಉತ್ಪಾದನೆ ದ್ವಿಗುಣ
ಕೈಗಾರಿಕಾ ಅಭಿವೃದ್ಧಿಯಲ್ಲಿ ಶೇ.3.4ರಷ್ಟು ಕುಸಿತ
ಸ್ಯಾಮ್‌ಸಂಗ್‌ನಿಂದ 10 ಸಾವಿರದವರೆಗೆ ದರ ಕಡಿತ
ಜಿಎಸ್‌ಎಂ ಗ್ರಾಹಕರ ಸಂಖ್ಯೆ 7 ಮಿಲಿಯನ್
ಮುಂದಿನ ವಾರದಲ್ಲಿ 2ನೇ ಪ್ಯಾಕೇಜ್ ಘೋಷಣೆ