ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫೆಬ್ರವರಿಯಿಂದ ಪೆಟ್ರೋಲಿಯಂ ದರಗಳ ಮುಕ್ತ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆಬ್ರವರಿಯಿಂದ ಪೆಟ್ರೋಲಿಯಂ ದರಗಳ ಮುಕ್ತ?
ಪ್ರಸ್ತುತ ಮಟ್ಟದಲ್ಲಿ ತೈಲ ಬೆಲೆಗಳು ಬ್ಯಾರಲೊಂದರ 45 ಡಾಲರುಗಳ ದರ ಮುಂದುವರಿದಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಿಯಂತ್ರಣವನ್ನು ಮುಕ್ತಗೊಳಿಸಲಿದೆ.

ಸರಕಾರವು 2002 ಎಪ್ರಿಲ್ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಆಡಳಿತ ಅಧಿಕಾರಿಗಳ ನಿಯಂತ್ರಣದಿಂದ ಮುಕ್ತವಾಗಿರಿಸಿತ್ತು. ಇದಾದ ಬಳಿಕ ರಾಜ್ಯದ ಚಿಲ್ಲರೆ ವ್ಯಾಪಾರಿಗಳು ವೆಚ್ಚದ ಬದಲಾವಣೆಗನುಸಾರ ಪ್ರತಿ ಹದಿನೈದು ದಿನಗಳಿಗೊಮ್ಮ ಪೆಟ್ರೋಲ್ ದರಗಳಲ್ಲಿ ಬದಲಾವಣೆ ಮಾಡುತ್ತಿದ್ದರು.

ಆದರೆ ಕಚ್ಚಾ ತೈಲ ಬೆಲೆಯು ಬ್ಯಾರಲೊಂದರ 37 ಡಾಲರ್‌ಗಳಿಗೆ ಏರಿದಾಗ, 2004ರಲ್ಲಿ ಸರ್ಕಾರ ಮತ್ತೆ ನಿಯಂತ್ರಣವನ್ನು ಪಡೆದುಕೊಂಡಿತ್ತು, ನಂತರ ಕಚ್ಚಾ ತೈಲ ಬೆಲೆ ಗಗನಕ್ಕೇರಿ ಜುಲೈ 2008ರಲ್ಲಿ ಬ್ಯಾರಲೊಂದರ 147 ರೂಪಾಯಿ ತಲುಪಿದ್ದು ಈಗ ಇತಿಹಾಸ.

ಇತ್ತೀಚೆಗೆ ಇಳಿಕೆ ಕಂಡ ದರವು ಈ ತಿಂಗಳಲ್ಲಿ ಬ್ಯಾರಲೊಂದರ ಸರಾಸರಿ 43-44 ಡಾಲರ್‌ಗೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಈ ಪ್ರವೃತ್ತಿ ಸ್ಥಿರಗೊಂಡರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಆಡಳಿತ ನಿಯಂತ್ರಣದಿಂದ ಮುಕ್ತಗೊಳಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ತೈಲ ದರ ಹೇಗೆ ವರ್ತಿಸುತ್ತದೆ ಎಂದು ನೋಡಲು ಮಧ್ಯಂತರ ಕ್ರಮ ಎಂಬಂತೆ ಸರ್ಕಾರವು ಈ ತಿಂಗಳು ಪೆಟ್ರೋಲ್‌ಗೆ ಲೀಟರೊಂದರ ಐದು ರೂಪಾಯಿ ಮತ್ತು ಡೀಸೆಲ್‌ಗೆ 2 ರೂಪಾಯಿಯಷ್ಟು ಕಡಿತವನ್ನು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ದರ ಕಡಿತದ ಬಳಿಕವೂ ತೈಲ ಸಂಸ್ಥೆಗಳು ತೈಲ ಮಾರಾಟದಲ್ಲಿ ಪೆಟ್ರೋಲ್ ಲೀಟರೊಂದರ 9.89 ರೂಪಾಯಿ ಮತ್ತು ಡೀಸೆಲ್‌ ಮೇಲೆ ಲೀಟರೊಂದರ 1.03 ರೂಪಾಯಿ ಲಾಭ ಪಡೆಯುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಟೋ ಉದ್ದಿಮೆಗಳಿಗೆ ಒಬಾಮ ತರಾಟೆ
ಜ.15 ರಂದು ಆನ್‌ಲೈನ್‌ನಲ್ಲಿ 3ಜಿ ಸ್ಪೆಕ್ಟ್ರಂ ಹರಾಜು
2011-12ರ ವೇಳೆಗೆ ಉಕ್ಕು ಉತ್ಪಾದನೆ ದ್ವಿಗುಣ
ಕೈಗಾರಿಕಾ ಅಭಿವೃದ್ಧಿಯಲ್ಲಿ ಶೇ.3.4ರಷ್ಟು ಕುಸಿತ
ಸ್ಯಾಮ್‌ಸಂಗ್‌ನಿಂದ 10 ಸಾವಿರದವರೆಗೆ ದರ ಕಡಿತ
ಜಿಎಸ್‌ಎಂ ಗ್ರಾಹಕರ ಸಂಖ್ಯೆ 7 ಮಿಲಿಯನ್