ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಋಣಾತ್ಮಕ ವಲಯಕ್ಕೆ ಜಾರಿದ ಕೈಗಾರಿಕಾ ಉತ್ಪಾದನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಋಣಾತ್ಮಕ ವಲಯಕ್ಕೆ ಜಾರಿದ ಕೈಗಾರಿಕಾ ಉತ್ಪಾದನೆ
ಭಾರತವು 1993ರ ನಂತರ ಇದೇ ಮೊದಲ ಬಾರಿಗೆ ಕೈಗಾರಿಕೆ ಉತ್ಪಾದನೆಯಲ್ಲಿ ಭಾರೀ ಕುಸಿತವನ್ನು ಕಂಡಿದೆ.

ಕಳೆದ ಅಕ್ಟೋಬರ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಋಣತ್ಮಾಕ ವಲಯದತ್ತ ಜಾರಿಕೊಂಡಿತ್ತಲ್ಲದೆ ಇದು ಆರ್ಥಿಕತೆಯ ಆಳವಾದ ಕುಗ್ಗುವಿಕೆಗೆ ಸೂಚನೆಯನ್ನು ನೀಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಶೇ.5.45ರಷ್ಟಿದ್ದ ವೃದ್ಧಿಯು ಅಕ್ಟೋಬರ್ ತಿಂಗಳಲ್ಲಿ ಋಣಾತ್ಮಕ ವಲಯಕ್ಕಿಳಿದಿದ್ದು -0.4ಕ್ಕಿಳಿದಿದೆ. ಇದೇ ದರವು 2007ರ ಅಕ್ಟೋಬರ್‌ನಲ್ಲಿ ಶೇ.12.2 ಇತ್ತು.

ಸೂಚ್ಯಂಕದಲ್ಲಿ ಶೇ.80ರಷ್ಟಿರುವ ತಯಾರಿಕಾ ಉತ್ಪನ್ನಗಳು, ಕಳೆದ ವರ್ಷ ಇದೇ ಸಂದರ್ಭದಲ್ಲಿ ವಸ್ತುಗಳ ಉತ್ಪಾದನೆಯಲ್ಲಿ ಶೇಕಡಾ 13.8ರಷ್ಟು ವೃದ್ಧಿ ಇದ್ದಿರುವುದಕ್ಕೆ ತದ್ವಿರುದ್ಧವಾಗಿ ಅಕ್ಟೋಬರ್‌ನಲ್ಲಿ ಶೇಕಡಾ 1.2ರಷ್ಟು ಋಣಾತ್ಮಕವಾಗಿದೆ.

ತಿಂಗಳಾರಂಭದಲ್ಲಿ ಸರಕಾರವು ಉತ್ಪಾದಕ ವಲಯದ ರಕ್ಷಣೆಗಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರಲ್ಲಿ
ಉತ್ಪಾದನಾ ತೆರಿಗೆಯನ್ನು ಶೇಕಡಾ 4ರಷ್ಟು ಕಡಿತ ಮಾಡಲಾಗಿತ್ತು.

ವಸ್ತುಗಳ ಉತ್ಪಾದನೆಗಳಲ್ಲಿ ಕಳೆದ ವರ್ಷ ಶೇಕಡಾ 10.6ರಷ್ಟಿದ್ದ ಬೆಳವಣಿಗೆಯು ಕೆವಲ ಏಳು ತಿಂಗಳ ಅವಧಿಯಲ್ಲಿ 4.2ರಷ್ಟಾಗಿ ಬೆಳವಣಿಗೆಯು ಕುಂಠಿತಗೊಂಡಿವೆ.

ಇದೇ ವೇಳೆ ಕಳೆದ ವರ್ಷ ಶೇಕಡಾ 7.2ರಷ್ಟಿದ್ದ ವಿದ್ಯುತ್ ವಿಭಾಗದ ಬೆಳವಣಿಗೆಯು ಶೇಕಡಾ 2.8ಕ್ಕೆ ಕುಂಠಿತಗೊಂಡಿದೆ. ಖನನ ಕ್ಷೇತ್ರದಲ್ಲಿಯ‌ೂ ಸಹ ಬೆಳವಣಿಗೆಯು ಶೇಕಡಾ 4.9 ರಿಂದ 3.7 ಆಗಿ ಕುಂಠಿತಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫೆಬ್ರವರಿಯಿಂದ ಪೆಟ್ರೋಲಿಯಂ ದರಗಳ ಮುಕ್ತ?
ಆಟೋ ಉದ್ದಿಮೆಗಳಿಗೆ ಒಬಾಮ ತರಾಟೆ
ಜ.15 ರಂದು ಆನ್‌ಲೈನ್‌ನಲ್ಲಿ 3ಜಿ ಸ್ಪೆಕ್ಟ್ರಂ ಹರಾಜು
2011-12ರ ವೇಳೆಗೆ ಉಕ್ಕು ಉತ್ಪಾದನೆ ದ್ವಿಗುಣ
ಕೈಗಾರಿಕಾ ಅಭಿವೃದ್ಧಿಯಲ್ಲಿ ಶೇ.3.4ರಷ್ಟು ಕುಸಿತ
ಸ್ಯಾಮ್‌ಸಂಗ್‌ನಿಂದ 10 ಸಾವಿರದವರೆಗೆ ದರ ಕಡಿತ