ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪ್ರಧಾನಿ ಭೇಟಿ ಮಾಡಿದ ಹೂಡಿಕಾ ಆಯೋಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಭೇಟಿ ಮಾಡಿದ ಹೂಡಿಕಾ ಆಯೋಗ
ಮುಂಬೈ ದಾಳಿಯಿಂದಾಗಿ ವಾಣಿಜ್ಯ ವಿಶ್ವಾಸವು ನಲುಗುತ್ತಿರುವ ಹಿನ್ನೆಲೆಯಲ್ಲಿ ,ಬಂಡವಾಳ ಹೂಡಿಕೆ ಆಯೋಗದ ಸದಸ್ಯರು ಶುಕ್ರವಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ದಾಳಿಯಿಂದಾಗಿ ಮತ್ತು ಜಾಗತಿ ಆರ್ಥಿಕ ಕುಸಿತದ ಪರಿಣಾವನ್ನು ಚರ್ಚಿಸಿದರು.

ಅಯೋಗದ ಅಧ್ಯಕ್ಷ ರತನ್ ಟಾಟಾ ಮತ್ತು ಸದಸ್ಯರಾದ ದೀಪಕ್ ಎಸ್ ಪರೇಖ್ ಮತ್ತು ಅಶೋಕ್ ಗಂಗೂಲಿ ನವದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮನಮೋಹನ್ ಸಿಂಗ್‌ನ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಬಂಡವಾಳ ಹೂಡಿಕೆಗಾರರ ಆಯೋಗವು ಪ್ರಧಾನಿಯನ್ನು ತುಂಬಾ ದಿವಸಗಳಿಂದ ಭೇಟಿಯಾಗಿರಲಿಲ್ಲ ಆದುದರಿಂದ ಅವರನ್ನು ಭೇಟಿಯಾಗಿ ಪ್ರಸ್ತುತ ಆರ್ಥಿಕ ಕುಸಿತದ ಕುರಿತು ಚರ್ಚಿಸಲಾಯಿತು ಎಂದು ಪರೇಖ್ ಅವರನ್ನು ಸಂಪರ್ಕಿಸಿದ ವರದಿಗಾರರಿಗೆ ತಿಳಿಸಿದರಾದರೂ ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ಅಮೆರಿಕ ಮತ್ತು ಯುರೋಪ್‌ಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಭಾರತದ ಆರ್ಥಿಕತೆಗೆ ದೊಡ್ಡ ಮಟ್ಟದ ಪರಿಣಾಮವಿಲ್ಲದಿದ್ದರೂ, ರಫ್ತುಪ್ರಮಾಣದಲ್ಲಿ ಕುಸಿತಗೊಂಡಿದ್ದು, ಉತ್ಪಾದನಾ ರಂಗದ ಮೇಲೆ ಹೊಡೆತ ಬಿದ್ದಿದೆ.

ಇದು ಹೂಡಿಕೆದಾರರ ಆಯೋಗದ ಸಭೆಯಾಗಿದ್ದು, ನಮ್ಮ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಶೋಕ್ ಗಂಗೂಲಿ ನುಡಿದರು. ಹೆಚ್ಚಿನ ಮಾಹಿತಿಗಳನ್ನು ನೀಡಲು ಅವರೂ ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಋಣಾತ್ಮಕ ವಲಯಕ್ಕೆ ಜಾರಿದ ಕೈಗಾರಿಕಾ ಉತ್ಪಾದನೆ
ಫೆಬ್ರವರಿಯಿಂದ ಪೆಟ್ರೋಲಿಯಂ ದರಗಳ ಮುಕ್ತ?
ಆಟೋ ಉದ್ದಿಮೆಗಳಿಗೆ ಒಬಾಮ ತರಾಟೆ
ಜ.15 ರಂದು ಆನ್‌ಲೈನ್‌ನಲ್ಲಿ 3ಜಿ ಸ್ಪೆಕ್ಟ್ರಂ ಹರಾಜು
2011-12ರ ವೇಳೆಗೆ ಉಕ್ಕು ಉತ್ಪಾದನೆ ದ್ವಿಗುಣ
ಕೈಗಾರಿಕಾ ಅಭಿವೃದ್ಧಿಯಲ್ಲಿ ಶೇ.3.4ರಷ್ಟು ಕುಸಿತ