ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಯಾಂಕ್‌ಗಳ ಬಡ್ಡಿ ದರ ಕಡಿತ ಸಾಧ್ಯತೆ:ಕಾಮತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್‌ಗಳ ಬಡ್ಡಿ ದರ ಕಡಿತ ಸಾಧ್ಯತೆ:ಕಾಮತ್
ಹೈದ್ರಾಬಾದ್ : ಮುಂಬರುವ ಎರಡು ಅಥವಾ ಮೂರು ವಾರಗಳಲ್ಲಿ ಠೇವಣಿ ಹಾಗೂ ಸಾಲದ ಬಡ್ಡಿದರಗಳಲ್ಲಿ ಕಡಿತವಾಗುವ ಸಾಧ್ಯತೆಗಳಿವೆ ಎಂದು ಐಸಿಐಸಿಐ ಬ್ಯಾಂಕ್ ಮುಖ್ಯಸ್ಥ ಕೆ.ವಿ.ಕಾಮತ್ ಭವಿಷ್ಯ ನುಡಿದಿದ್ದಾರೆ.

ದೇಶದ ಮಾರುಕಟ್ಟೆ ನಿಧಾನವಾಗಿ ಕುಸಿತ ಕಾಣುತ್ತಿದ್ದು, ಕಳೆದ ಕೆಲ ವಾರಗಳಲ್ಲಿ 10 ವರ್ಷದ ಸರಕಾರಿ ಬಾಂಡ್‌ಗಳ ಮೇಲಿನ ಬಡ್ಡಿ ದರ ಶೇ.1.5ರಷ್ಟು ಪಾಯಿಂಟ್‌ಗಳ ಇಳಿಕೆಯಾಗಿದೆ. ಆದ್ದರಿಂದ ಮುಂದಿನ ಎರಡು ವಾರಗಳಲ್ಲಿ ಠೇವಣಿ ಹಾಗೂ ಸಾಲದ ಮೇಲಿನ ಬಡ್ಡಿ ದರ ಇಳಿಕೆಯಾಗಲಿವೆ ಎಂದು ಕಾಮತ್ ಅಭಿಪ್ರಾಯಪಟ್ಟಿದ್ದಾರೆ.

ಒಂದು ವರ್ಷದ ಠೇವಣಿಯಲ್ಲಿ 150-200 ಬೇಸಿಸ್ ಪಾಯಿಂಟ್‌ಗಳ ಕುಸಿತವಾಗಿದ್ದು, ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ಕಾಮತ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇರು ಮಾರುಕಟ್ಟೆ ಕುಸಿತ ಸಕಾಲಿಕ ತಿದ್ದುಪಡಿ: ಭಟ್
ಪ್ರಧಾನಿ ಭೇಟಿ ಮಾಡಿದ ಹೂಡಿಕಾ ಆಯೋಗ
ಋಣಾತ್ಮಕ ವಲಯಕ್ಕೆ ಜಾರಿದ ಕೈಗಾರಿಕಾ ಉತ್ಪಾದನೆ
ಫೆಬ್ರವರಿಯಿಂದ ಪೆಟ್ರೋಲಿಯಂ ದರಗಳ ಮುಕ್ತ?
ಆಟೋ ಉದ್ದಿಮೆಗಳಿಗೆ ಒಬಾಮ ತರಾಟೆ
ಜ.15 ರಂದು ಆನ್‌ಲೈನ್‌ನಲ್ಲಿ 3ಜಿ ಸ್ಪೆಕ್ಟ್ರಂ ಹರಾಜು