ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಸಿದ್ದತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಸಿದ್ದತೆ
PTI
ಪ್ರಸಕ್ತ ವಾರದಲ್ಲಿ ನಡೆಯಲಿರುವ ಒಪೆಕ್ ಸಭೆಯಲ್ಲಿ ಬೃಹತ್ ಉತ್ಪಾದನೆ ಕಡಿತ ಘೋಷಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 47 ಡಾಲರ್‌ಗೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ನ್ಯೂಯಾರ್ಕ್ ಶೇರುಪೇಟೆಯ ಜನೆವರಿ ತಿಂಗಳ ವಿತರಣೆಯಲ್ಲಿ ಕಚ್ಚಾ ತೈಲ ದರ 92 ಸೆಂಟ್‌ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 47.20ಡಾಲರ್‌ಗಳಿಗೆ ತಲುಪಿದೆ. ಶುಕ್ರವಾರದಂದು ಪ್ರತಿ ಬ್ಯಾರೆಲ್‌ಗೆ 1.70 ಡಾಲರ್‌ ಇಳಿಕೆಯಾಗಿ 46.28 ಡಾಲರ್‌ಗಳಿಗೆ ತಲುಪಿತ್ತು.

ಪೆಟ್ರೋಲಿಯಂ ರಫ್ತುದಾರ ದೇಶಗಳ ಸಂಸ್ಥೆಯಾದ ಒಪೆಕ್,ಜಾಗತಿಕ ಬೇಡಿಕೆಯಲ್ಲಿ ಶೇ.40ರಷ್ಟು ತೈಲವನ್ನು ಸರಬರಾಜು ಮಾಡುತ್ತಿದೆ. ಒಪೆಕ್ ಸದಸ್ಯರ ಸಭೆ ಬುಧವಾರದಂದು ಅಲ್ಜೀರಿಯಾದಲ್ಲಿ ನಡೆಯುಲಿದ್ದು, ಸಭೆಯ ನಂತರ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಒಪೆಕ್ ವಕ್ತಾರರು ತಿಳಿಸಿದ್ದಾರೆ.

ಒಪೆಕ್ ರಾಷ್ಟ್ರಗಳ ಸಭೆಯಲ್ಲಿ ಇರಾನ್‌ಗೆ 1.5 ರಿಂದ 2 ಮಿಲಿಯನ್ ಬ್ಯಾರೆಲ್‌ ಉತ್ಪಾದನೆ ಕಡಿತ ಮಾಡುವಂತೆ ಘೋಷಿಸುವ ಸಾಧ್ಯತೆಗಳಿವೆ ಎಂದು ಇರಾನ್‌ನ ತೈಲ ಸಚಿವ ಘೋಲಾಮ್ ಹೊಸೈನ್ ನೊಝಾರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಟೋ ಪರಿಹಾರ ಪ್ಯಾಕೇಜ್ ವಿಳಂಬ :ಬುಷ್
ಬ್ಯಾಂಕ್‌ಗಳ ಬಡ್ಡಿ ದರ ಕಡಿತ ಸಾಧ್ಯತೆ:ಕಾಮತ್
ಶೇರು ಮಾರುಕಟ್ಟೆ ಕುಸಿತ ಸಕಾಲಿಕ ತಿದ್ದುಪಡಿ: ಭಟ್
ಪ್ರಧಾನಿ ಭೇಟಿ ಮಾಡಿದ ಹೂಡಿಕಾ ಆಯೋಗ
ಋಣಾತ್ಮಕ ವಲಯಕ್ಕೆ ಜಾರಿದ ಕೈಗಾರಿಕಾ ಉತ್ಪಾದನೆ
ಫೆಬ್ರವರಿಯಿಂದ ಪೆಟ್ರೋಲಿಯಂ ದರಗಳ ಮುಕ್ತ?