ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತಾಜ್‌ ಗ್ರೂಪ್‌ನಿಂದ ಕ್ಷೇಮಾಭ್ಯುದಯ ನಿಧಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಜ್‌ ಗ್ರೂಪ್‌ನಿಂದ ಕ್ಷೇಮಾಭ್ಯುದಯ ನಿಧಿ
PTI
ಉಗ್ರರ ದಾಳಿಗೆ ನಲುಗಿದ ತಾಜ್ ಗ್ರೂಪ್, ಉಗ್ರರಿಗೆ ಬಲಿಯಾದವರ ಕುಟುಂಬಗಳಿಗೆ ಅಲ್ಪ ನೆಮ್ಮದಿ ನೀಡಲು ಸಾರ್ವಜನಿಕ ಸೇವೆ ಕ್ಷೇಮಾಭ್ಯುದಯ ನಿಧಿ ಮತ್ತು ತಾಜ್ ಸಾರ್ವಜನಿಕ ಸೇವೆ ಕ್ಷೇಮಾಭ್ಯುದಯ ನಿಧಿಯನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ತಾಜ್ ಮೂಲಗಳು ತಿಳಿಸಿವೆ.

ತಾಜ್ ಉದ್ಯೋಗಿಗಳು, ಭದ್ರತಾ ಪಡೆಗಳ ಸದಸ್ಯರು, ಸಾರ್ವಜನಿಕರು ಮತ್ತು ಉಗ್ರರಿಗೆ ಬಲಿಯಾದ ಎಲ್ಲ ವ್ಯಕ್ತಿಗಳ ಕುಟುಬಂಗಳಿಗೆ ಆರ್ಥಿಕ ಸಹಾಯವನ್ನು ನೀಡಲು ತಾಜ್ ಸಾರ್ವಜನಿಕ ಸೇವೆ ಕ್ಷೇಮಾಭ್ಯುದಯ ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ತಾಜ್ ಗ್ರೂಪ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ವಿದೇಶಗಳಿಂದ ದಾನವನ್ನು ಸ್ವೀಕರಿಸುವ ಕುರಿತಂತೆ ಸರಕಾರ ಹಾಗೂ ಮತ್ತೀತರ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ಅನುಮತಿ ದೊರತೆ ನಂತರ ಉಗ್ರರ ದಾಳಿಯಲ್ಲಿ ಬಲಿಯಾದವರಿಗೆ ಶೀಘ್ರ ಪರಿಹಾರ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಾಜ್ ಗ್ರೂಪ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಹೋಟೆಲ್‌ಗಳು, ಸರ್ ದೊರಾಬ್ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟ್ರಸ್ಟ್‌ಗಳು ಕ್ಷೇಮಾಭ್ಯುದಯ ನಿಧಿಗೆ ಈಗಾಗಲೇ ದಾನವನ್ನು ನೀಡಿವೆ ಎಂದು ತಾಜ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಸಿದ್ದತೆ
ಅಟೋ ಪರಿಹಾರ ಪ್ಯಾಕೇಜ್ ವಿಳಂಬ :ಬುಷ್
ಬ್ಯಾಂಕ್‌ಗಳ ಬಡ್ಡಿ ದರ ಕಡಿತ ಸಾಧ್ಯತೆ:ಕಾಮತ್
ಶೇರು ಮಾರುಕಟ್ಟೆ ಕುಸಿತ ಸಕಾಲಿಕ ತಿದ್ದುಪಡಿ: ಭಟ್
ಪ್ರಧಾನಿ ಭೇಟಿ ಮಾಡಿದ ಹೂಡಿಕಾ ಆಯೋಗ
ಋಣಾತ್ಮಕ ವಲಯಕ್ಕೆ ಜಾರಿದ ಕೈಗಾರಿಕಾ ಉತ್ಪಾದನೆ