ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗೃಹ ಸಾಲಕ್ಕೆ ಬಡ್ಡಿ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೃಹ ಸಾಲಕ್ಕೆ ಬಡ್ಡಿ ದರ ಕಡಿತ
WD
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌‌ಗಳು, ಗೃಹಸಾಲ ಬಡ್ಡಿ ದರಗಳಲ್ಲಿ ಕಡಿತ ಘೋಷಿಸಿದ್ದು, 5 ಲಕ್ಷ ಗೃಹ ಸಾಲಕ್ಕೆಗರಿಷ್ಟ ಶೇ.8.5ರಷ್ಟು ಹಾಗೂ 5 ರಿಂದ 20 ಲಕ್ಷ ಸಾಲಕ್ಕೆ ಗರಿಷ್ಟ ಶೇ.9.25ರಷ್ಟು ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.

20 ಲಕ್ಷದವರೆಗೆ ಸಾಲ ನೀಡುವ ಸಂಧರ್ಭದಲ್ಲಿ ಇತರೆ ಶುಲ್ಕ ಹಾಗೂ ಪೂರ್ವ ಪಾವತಿ ಶುಲ್ಕವನ್ನು ತೆಗೆದುಹಾಕಲಾಗಿದೆ. ಗೃಹ ಸಾಲ ಪಡೆಯುವ ಗ್ರಾಹಕರಿಗೆ ಉಚಿತ ವಿಮೆ ನೀಡಲಾಗುವುದು ಎಂದು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ತಿಳಿಸಿದೆ.

ಕೇಂದ್ರ ಸರಕಾರ ಡಿಸೆಂಬರ್ 7 ರಂದು ಉತ್ತೇಜನ ಪ್ಯಾಕೇಜ್ ಘೋಷಿಸಿದ ಹಿನ್ನೆಲೆಯಲ್ಲಿ, ಐದು ವರ್ಷಗಳ ಅವಧಿಗೆ ಬಡ್ಡಿ ದರ ಇಳಿಕೆಯಾಗಿದ್ದು, ಶೇ.8.5ರಿಂದ ಶೇ.9.25ಕ್ಕಿಂತ ಹೆಚ್ಚಿನ ಬಡ್ಡಿ ದರ ವಿಧಿಸುವಂತಿಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಒ.ಪಿ.ಭಟ್ ಹೇಳಿದ್ದಾರೆ.

ಪ್ಯಾಕೇಜ್ ಆಕರ್ಷಕವಾಗಿಸಲು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು 5 ಲಕ್ಷ ರೂಪಾಯಿಗಳ ಸಾಲವನ್ನು ಶೇ.10ರ ಮಿತಿಯಲ್ಲಿ ನೀಡಬೇಕು. ಹಾಗೂ 5 ರಿಂದ 20 ಲಕ್ಷ ಸಾಲವನ್ನು ಶೇ.15 ರಷ್ಟು ಮಿತಿಯನ್ನು ನೀಡುವುದಲ್ಲದೇ ಸಾಲದ ವಿಮೆಯನ್ನು ಉಚಿತವಾಗಿ ಒದಗಿಸಬೇಕು ಎಂದು ಭಟ್ ತಿಳಿಸಿದ್ದಾರೆ.

ಹೊಸದಾಗಿ ಗೃಹಸಾಲ ಪಡೆಯುವವರಿಗೆ ಮಾತ್ರ ಬಡ್ಡಿ ದರ ಕಡಿತ ಅನ್ವಯವಾಗಲಿದ್ದು, ಪ್ರಸ್ತುತ ಗೃಹ ಸಾಲಪಡೆದವರಿಗೆ ಯಾವುದೇ ರಿಯಾಯತಿ ಘೋಷಿಸಲಾಗಿಲ್ಲ ಎಂದು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮುಖ್ಯಸ್ಥ ಒ.ಪಿ. ಭಟ್ ಇಂಡಿಯನ್ಸ್ ಬ್ಯಾಂಕ್‌ ಅಸೋಸಿಯೇಶನ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಜ್‌ ಗ್ರೂಪ್‌ನಿಂದ ಕ್ಷೇಮಾಭ್ಯುದಯ ನಿಧಿ
ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಸಿದ್ದತೆ
ಅಟೋ ಪರಿಹಾರ ಪ್ಯಾಕೇಜ್ ವಿಳಂಬ :ಬುಷ್
ಬ್ಯಾಂಕ್‌ಗಳ ಬಡ್ಡಿ ದರ ಕಡಿತ ಸಾಧ್ಯತೆ:ಕಾಮತ್
ಶೇರು ಮಾರುಕಟ್ಟೆ ಕುಸಿತ ಸಕಾಲಿಕ ತಿದ್ದುಪಡಿ: ಭಟ್
ಪ್ರಧಾನಿ ಭೇಟಿ ಮಾಡಿದ ಹೂಡಿಕಾ ಆಯೋಗ