ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 65 ಸಾ. ಉದ್ಯೋಗಿಗಳ ಹುದ್ದೆ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
65 ಸಾ. ಉದ್ಯೋಗಿಗಳ ಹುದ್ದೆ ಕಡಿತ
ಜಾಗತಿಕ ಆರ್ಥಿಕ ಕುಸಿತ ದೇಶದ ಆರ್ಥಿಕತೆಯ ಮೇಲೆ ಬೀರಿದ ಪರಿಣಾಮದಿಂದಾಗಿ, ದೇಶದಲ್ಲಿ ಅಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ 65,500 ಉದ್ಯೋಗಿಗಳ ಹುದ್ದೆಗಳನ್ನು ಕಡಿತಗೊಳಿಸಲಾಗಿದೆ ಎಂದು ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.

ದೇಶದಲ್ಲಿ ಉದ್ಯೋಗಿಗಳ ಹುದ್ದೆ ಕಡಿತ ಕುರಿತಂತೆ ಅಧ್ಯಯನ ನಡೆಸಲು ವಾಣಿಜ್ಯ ಇಲಾಖೆ ತಂಡವನ್ನು ರಚಿಸಿದ್ದು, ರಫ್ತು ವಹಿವಾಟಿನಲ್ಲಿ ಕೂಡಾ 1792 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಲೋಕಸಭೆಗೆ ತಿಳಿಸಿದ್ದಾರೆ.

ಹೊರಗುತ್ತಿಗೆ ,ಜವಳಿ, ಗಾರ್ಮೆಂಟ್ಸ್ , ಇಂಜಿನಿಯರಿಂಗ್, ಆಭರಣ, ಕರಕುಶಲ, ಅಹಾರ ತಯಾರಿಕೆ, ಗಣಿ, ಸಾಗರೋತ್ಪನ್ನ ಕ್ಷೇತ್ರಗಳಲ್ಲಿ ಹೆಚ್ಚು ಹುದ್ದೆಗಳನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ಪ್ರಯತ್ನಿಸುತ್ತಿವೆ ಎಂದು ಸಚಿವ ಆಸ್ಕರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೃಹ ಸಾಲಕ್ಕೆ ಬಡ್ಡಿ ದರ ಕಡಿತ
ತಾಜ್‌ ಗ್ರೂಪ್‌ನಿಂದ ಕ್ಷೇಮಾಭ್ಯುದಯ ನಿಧಿ
ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಸಿದ್ದತೆ
ಅಟೋ ಪರಿಹಾರ ಪ್ಯಾಕೇಜ್ ವಿಳಂಬ :ಬುಷ್
ಬ್ಯಾಂಕ್‌ಗಳ ಬಡ್ಡಿ ದರ ಕಡಿತ ಸಾಧ್ಯತೆ:ಕಾಮತ್
ಶೇರು ಮಾರುಕಟ್ಟೆ ಕುಸಿತ ಸಕಾಲಿಕ ತಿದ್ದುಪಡಿ: ಭಟ್