ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ಉತ್ಪಾದನೆ ಕಡಿತಕ್ಕೆ ಆದ್ಯತೆ: ಒಪೆಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಉತ್ಪಾದನೆ ಕಡಿತಕ್ಕೆ ಆದ್ಯತೆ: ಒಪೆಕ್
ಒಪೆಕ್‌ ಟ್ರೋಲಿಯಂ ರಫ್ತು ದೇಶಗಳು ಪ್ರತಿ ದಿನ 1 ಮಿಲಿಯನ್ ಬ್ಯಾರೆಲ್‌ಗಿಂತಲೂ ಹೆಚ್ಚು ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದು ಅಗತ್ಯವಾಗಿದೆ ಎಂದು ಒಪೆಕ್ ಅಧ್ಯಕ್ಷ ಚಾಕಿಬ್ ಖೇಲಿಲ್ ಹೇಳಿದ್ದಾರೆ.

ನಾಳೆ ಅಲ್ಜೀರಿಯಾದಲ್ಲಿ ನಡೆಯಲಿರುವ ಒಪೆಕ್ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ತೈಲ ಉತ್ಪಾದನೆ ಕಡಿತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ. ತೈಲ ಸಂಗ್ರಹಣೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರತಿ ದಿನ 1 ಮಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚಿನ ಉತ್ಪಾದನೆಯನ್ನು ಕಡಿತಗೊಳಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ ಉತ್ತಮ ದರವಾಗಿದೆ ಎಂದು ಸೌದಿ ಅರೇಬೀಯಾ ದೊರೆ ಕಿಂಗ್ ಅಬ್ದುಲ್ಲಾ ತಿಳಿಸಿದ್ದಾರೆ.

ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಳಿದ್ದ ದರ ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 44ಡಾಲರ್ ಇಳಿಕೆಯಾಗಿರುವುದರಿಂದ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ ಎಂದು ಒಪೆಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
65 ಸಾ. ಉದ್ಯೋಗಿಗಳ ಹುದ್ದೆ ಕಡಿತ
ಗೃಹ ಸಾಲಕ್ಕೆ ಬಡ್ಡಿ ದರ ಕಡಿತ
ತಾಜ್‌ ಗ್ರೂಪ್‌ನಿಂದ ಕ್ಷೇಮಾಭ್ಯುದಯ ನಿಧಿ
ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಸಿದ್ದತೆ
ಅಟೋ ಪರಿಹಾರ ಪ್ಯಾಕೇಜ್ ವಿಳಂಬ :ಬುಷ್
ಬ್ಯಾಂಕ್‌ಗಳ ಬಡ್ಡಿ ದರ ಕಡಿತ ಸಾಧ್ಯತೆ:ಕಾಮತ್